ಡಿಸಿಸಿ ಬ್ಯಾಂಕಿನಲ್ಲಿ ಬಹುಕೋಟಿ ಹಗರಣ | ಭಾರಿ ಅಕ್ರಮ |ವ್ಯವಸ್ಥಾಪಕರ ಅಮಾನತು  |ಲೋಕಾಯುಕ್ತ ತನಿಖೆಗೆ ಆದೇಶಿಸಿದೆ ಸರ್ಕಾರ 

ಬಸವರಾಜ ಕರೇಗಾರ

ಮುಖ್ಯಾಂಶಗಳು

* ಚಿಕ್ಕಬಳ್ಳಾಪುರ ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಬಹುಕೋಟಿ ಹಗರಣ.
* ಲೋಕಾಯುಕ್ತ ತನಿಖೆಗೆ ಸರ್ಕಾರ ಆದೇಶ.
* ವಿವಿಧ ಶಾಖೆಗಳಲ್ಲಿ 9.86 ಕೋಟಿ ದುರುಪಯೋಗ.
* ಕೆಲವರ ಸ್ವತ್ತಾದ ಡಿಸಿಸಿ ಬ್ಯಾಂಕುಗಳು.
* ಸರ್ಕಾರದಿಂದ ಮೀಸಲಾತಿ ಜಾರಿಗೆ ಮೀನಾಮೇಷ.
* ಠೇವಣಿ ಹಣ, ನಬಾರ್ಡ್, ಅಪೆಕ್ಸ್ ಬ್ಯಾಂಕಿನಿಂದ ಪಡೆದ ಸಾಲದಲ್ಲಿ ದುರುಪಯೋಗ.
* ಸ್ವಸಹಾಯ ಸಂಘಗಳಿಗೆ ನಿಯಮಾನುಸಾರ ಸಾಲ ಹಂಚಿಕೆಯಾಗಿಲ್ಲ‌
* 2017-18 ರಿಂದ 2023-24ರ ವರೆಗೆ ವಂಚನೆ ಪ್ರಕರಣ.
* ಹೈಕೋರ್ಟ್ನಲ್ಲಿ  20ಕ್ಕಿಂತ ಹೆಚ್ಚು ರಿಟ್ ಅರ್ಜಿ ಸಲ್ಲಿಕೆ.
* ಕೆಜಿಎಫ್ ಶಾಖೆ- 4.17 ಕೋಟಿ.
* ಚಿಂತಾಮಣಿ ಶಾಖೆ 2.23 ಕೋಟಿ.
* ಕೋಲಾರ 1.50 ಕೋಟಿ ಹಣ ದುರುಪಯೋಗ.
* ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಬ್ಯಾಂಕಿನಲ್ಲಿ 11 ಕೋಟಿ ಸಾಲ ಮನ್ನಾ ಮತ್ತು ವಿತರಣೆಯಲ್ಲಿ ಅವ್ಯವಹಾರ.
* ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಮನೆ ಸೇರಿದಂತೆ 9 ಕಡೆ ಲೋಕಾಯುಕ್ತರಿಂದ ದಾಳಿ
* 17 ಜನರ ವಿರುದ್ಧ ಆರೋಪ, ಕೇವಲ 3ಜನ ವ್ಯವಸ್ಥಾಪಕರ ಅಮಾನತ್ತು,ರಾಜ್ಯ ಮುಖ್ಯ ಆಡಳಿತ ಅಧಿಕಾರಿ ಮೀನಾಮೇಷ.
* 400 ಕೋಟಿ ಅಕ್ರಮದ ವಾಸನೆ.

—————————————————————

ಕೋಲಾರ,,

ಡಿಸಿಸಿ ಬ್ಯಾಂಕುಗಳಲ್ಲಿ ರಾಜ್ಯಾದ್ಯಂತ ಜಿಲ್ಲೆಯ ಬಹುತೇಕ ಬ್ಯಾಂಕುಗಳು ಕೆಲವೇ ಸಮುದಾಯಗಳ ಕಪಿಮುಷ್ಠಿಯಲ್ಲಿ ರುವುದರಿಂದ ಅವರು ಆಡಿದ್ದೆ ಆಟವಾಗಿದೆ.ಡಿಸಿಸಿ ನಿರ್ದೇಶಕರ ಮತ್ತು ಅಧ್ಯಕ್ಷರ ಆಯ್ಕೆಯಲ್ಲಿ ಮೀಸಲಾತಿ ಇರದ ಕಾರಣ ದೊಡ್ಡ ಸಮುದಾಯದ ನಾಯಕರು ಹಣಕೊಟ್ಟು ನಿರ್ದೇಶಕರಾಗುತ್ತಿದ್ದಾರೆ. ಬ್ಯಾಂಕುಗಳನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಕಲಬುರ್ಗಿ/ಯಾದಗಿರಿ ಡಿಸಿಸಿ ಬ್ಯಾಂಕಿನಲ್ಲಿ ಕೆಲವು ವರ್ಷಗಳ ಹಿಂದೆ ಭಾರಿ ಅಕ್ರಮ ನಡೆದಿತ್ತು. ಕೆಲವೇ ಸಮುದಾಯಗಳ ಕಪಿಮುಷ್ಠಿಯಲ್ಲಿರುವ ಡಿಸಿಸಿ ಬ್ಯಾಂಕುಗಳಲ್ಲಿ ಇತ್ತೀಚಿಗೆ ಬಹುಕೋಟಿ ಹಗರಣಗಳು ಪತ್ತೆಯಾಗುತ್ತಿದ್ದು ನೇಮಕಾತಿಯಲ್ಲಿಯೂ ಬೃಹತ್ ಅಕ್ರಮ ನಡೆಯುತ್ತಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಲ್ಲಿ ಬಹುಕೋಟಿ ಹಗರಣ ಬೆಳಕಿಗೆ ಬಂದಿದೆ. ಸರ್ಕಾರವೇ ಲೋಕಾಯುಕ್ತ ತನಿಕೆ ನಡೆಸುವಂತೆ ಆದೇಶಿಸಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಾಗಿದೆ.
ಬ್ಯಾಂಕಿನಲ್ಲಿ ಹಣ ದುರುಪಯೋಗ ಪ್ರಕರಣ ವಿವಿಧ ರೀತಿಯ ಅಕ್ರಮಗಳು ನಡೆದಿದೆ.ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 9.86 ಕೋಟಿ ರೂಪಾಯಿ ಅವ್ಯವಹಾರ ನಡೆದಿತ್ತು. ಬ್ಯಾಂಕುಗಳಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವರನ್ನು ಅಮಾನತ್ತುಗೊಳಿಸಿ ಆದೇಶಿಸಿದೆ.
ಡಿಸಿಸಿ ಬ್ಯಾಂಕಿನಲ್ಲಿ ಇಡಲಾದ ಸಾರ್ವಜನಿಕ ಠೇವಣಿ ಹಣ ದುರುಪಯೋಗವಾಗುತ್ತಿದ್ದು, ನವಾಡ್ ಮತ್ತು ಅಪೇಕ್ಸ್ ಬ್ಯಾಂಕುಗಳಿಂದ ಸಾಲ ತೆಗೆದುಕೊಂಡು ಸ್ವಸಹಾಯ ಸಂಘಗಳಿಗೆ ನಿಯಮಾನುಸಾರ ಸಾಲ ನೀಡದೇ ಅಕ್ರಮ ಎಸಗಲಾಗಿದೆ.
2017-18 ರಿಂದ 2023-24ರ ಅವಧಿಯಲ್ಲಿ ಹಣ ದುರುಪಯೋಗವಾಗಿದೆ.ಇಲಾಖೆಯಿಂದಲೆ
ತನಿಖೆ ನಡೆಸುವಂತೆ ಆದೇಶಿಸಿತ್ತು.ಹೈಕೋರ್ಟ್ ನಲ್ಲಿ  ಒಟ್ಟು 20ಕ್ಕಿಂತ ಹೆಚ್ಚು ಅರ್ಜಿಗಳು ಅಕ್ರಮದ ಬಗ್ಗೆ ರಿಟ್ ಅರ್ಜಿಗಳು ಸಲ್ಲಿಕೆಯಾಗಿದೆ.ಇದು ಬಹುಕೋಟಿ ಹಗುರಣವಾಗಿದೆ. ಸರಕಾರ ನೀಡಿದ ಸಹಾಯ ಧನದಲ್ಲಿಯೂ ಬಾರಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಇದನ್ನು ಕುರಿತು ವಿಧಾನ ಪರಿಷತ್ ಸದಸ್ಯ ಎಂ ಆರ್ ಎಲ್ ಅನಿಲಕುಮಾರ ಅಧಿವೇಶನದಲ್ಲಿ ಗಮನ ಸೆಳೆದಿದ್ದು  ಸರ್ಕಾರ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
9.86 ಕೋಟಿ ಅವ್ಯವಹಾರಕ್ಕೆ ಸಂಭಂದಿಸದಂತೆ ಕೋಲಾರ,ಕೆಜಿಎಫ್, ಚಿಂತಾಮಣಿ ತಾಲೂಕು ವ್ಯವಸ್ಥಾಪಕರನ್ನು ಅಮಾನತ್ತು ಮಾಡಲಾಗಿದ್ದು, ಕೋಲಾರ ಶಾಖೆಯಲ್ಲಿ 1.5ಕೋಟಿ, ಕೆಜಿಎಫ್ ಶಾಖೆಯಲ್ಲಿ 4.5 ಕೋಟಿ, ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ಹಣ ದುರುಪಯೋಗವಾಗಿದೆ.
2017-18 ನೇ ಸಾಲಿನಿಂದ 2020-21ನೇ ಸಾಲಿನಲ್ಲಿ ನಡೆದ ಅಕ್ರಮದ ತನಿಖೆ ನಡೆಸುವಂತೆ ಮುನೀರ್ ಎಂಬುವವರು ದೂರು ನೀಡಿದ್ದಾರೆ.ಮೂರು ಜನ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸುಮಾರು 11 ಕೋಟಿಗೂ ಹೆಚ್ಚು ಸಾಲ ಮನ್ನಾ ಮತ್ತು ಸಾಲ ವಿತರಣೆಯಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು.ಪ್ರಕರಣದಲ್ಲಿ ಪ್ರಮುಖ ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿತ್ತು.
ಚಿಂತಾಮಣಿ ಶಾಖೆ ಸೇರಿದಂತೆ ವಿವಿಧ ಕಡೆ ರೈತರ ಸಾಲಮನ್ನಾ ಹಣ ದುರ್ಬಳಕೆ, ನಕಲಿ ದಾಖಲೆ ಸೃಷ್ಟಿಸಲಾಗಿತ್ತು. 2025ರ ಮೇ ತಿಂಗಳಿನಲ್ಲಿ ಕೋಲಾರ, ಕೆಜಿಎಫ್, ಚಿಂತಾಮಣಿ ಸೇರಿದಂತೆ ಒಟ್ಟು 9 ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆದಿತ್ತು. ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರ ನಿವಾಸ ಮತ್ತು ಕಚೇರಿಗಳಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಈ ಅವ್ಯವಹಾರವು ಸುಮಾರು ₹11 ಕೋಟಿಯಿಂದ ₹400 ಕೋಟಿಯವರೆಗೆ ಇರಬಹುದು ಎಂಬ ಆರೋಪಗಳಿವೆ. ತೀವ್ರ ತನಿಖೆ ನಡೆಸಲು ಒತ್ತಾಯಿಸಿತ್ತು.
ಚಿಂತಾಮಣಿ ಹಾಗೂ ಗುಡಿಬಂಡೆ ಶಾಖೆಗಳಲ್ಲಿರುವ ಡಿಸಿಸಿ ಬ್ಯಾಂಕಿನ ಹಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆ‌ರ್ ದಾಖಲಾಗಿದೆ. ಬ್ಯಾಂಕಿನ ಸಿಇಒ ಸೇರಿದಂತೆ ಹಲವು ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ 17 ಮಂದಿಯ ವಿರುದ್ಧ ಆರೋಪವಿದ್ದರೂ, ಕೇವಲ ಮೂವರ ವಿರುದ್ಧವೇ ಕ್ರಮಕೈಗೊಳ್ಳಲಾಗಿದೆ ಎಂಬ ದೂರುಗಳು ಸಲ್ಲಿಕೆಯಾಗಿದ್ದವು.
ಡಿಸಿಸಿ ಬ್ಯಾಂಕಿನಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತು ಮಾಡಿದ್ದು,ಅವ್ಯವಹಾರದಲ್ಲಿ ಭಾಗಿಯಾದ ಇನ್ನೂ 12 ಮಂದಿ ವಿರುದ್ಧ ಕ್ರಮ ಕೈಗೊಳ್ಳಲು ಸಿಇಒ ಅವರು ಮೀನಾಮೇಷ ಎಣಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರುದಾರ ಮುನೀಶ್ ಆಪಾದಿಸಿದ್ದರು.