ಶಹಾಪುರ: ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ !! ಎಸ್ಪಿ ಭೇಟಿ ಪ್ರಕರಣ ದಾಖಲು

ಶಹಾಪುರ,,
 ಶಹಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಹಳ್ಳಿಯೊಂದರಲ್ಲಿ
 ಅಪ್ರಾಪ್ತೆ ಬಾಲಕಿ ಮೇಲೆ ಶಂಕಿತ ವ್ಯಕ್ತಿಗಳು ಅತ್ಯಾಚಾರವೆಸಗಿ ಬಾಲಕಿಯನ್ನು ರಸ್ತೆಯ ಬದಿಯ ಜಮೀನಿನಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದ್ದು, 13 ವರ್ಷದ ಬಾಲಕಿ ಎಂದು ತಿಳಿದು ಬಂದಿದ್ದು, ಶಹಪೂರು ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ..

ರವಿವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಬಾಲಕಿ ಪೋಷಕರ ಪಕ್ಕದಲ್ಲಿ ಮಗಳು ಕಾಣದ ಹುಡುಕಾಡಲು ಆರಂಭಿಸಿದಾಗ ರವಿವಾರ ಬೆಳಗ್ಗೆ 8ಗಂಟೆ ಸುಮಾರಿಗೆ ಗ್ರಾಮದ ಜಮೀನಿನಲ್ಲಿ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ಬಾಲಕಿಯನ್ನು ನೋಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ SP,DYSP,PI ಭೇಟಿ ಪರಿಶೀಲನೆ 
ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪೃಥ್ವಿ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಗ್ರಾಮಸ್ಥರು ಆಸ್ಪತ್ರೆಗೆ ದೌಡಾಯಿಸಿ ಪೊಲೀಸ್ ಇಲಾಖೆಯವರು ಬೇಗನೆ ಕ್ರಮ ಕೈಗೊಂಡು ಅಪರಾಧಿಗಳನ್ನು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಹೆದರದೆ ಪೊಲೀಸ್ ಇಲಾಖೆ ತನಿಖೆ ಮಾಡಬೇಕು.ಒಂದೆರಡು ದಿನಗಳಲ್ಲಿ ಅಪರಾಧಿಗಳನ್ನು ಬಂದಿಸದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ  ಸಮುದಾಯದ ಮುಖಂಡರಾದ  ಯಲ್ಲಪ್ಪ ನರಿ,ಶರ್ಬಣ್ಣ ರಸ್ತಾಪುರ, ರಾಯಪ್ಪ ಛಲವಾದಿ, ಯಮನಪ್ಪ ಆಗಸ್ತಿಹಾಳ, ಮಹೇಶ್ ಕಮತಗಿ, ದೇವೇಂದ್ರಪ್ಪ ಮೇಟಿ, ಯಂಕಣ್ಣ ಮೇಟಿ, ತಿರುಪತಿಗೌಡ ಬಾಣತಿಹಾಳ ಸೇರಿದಂತೆ ಇತರ ಮುಖಂಡರು ಇದ್ದರು.

Leave a Reply

Your email address will not be published. Required fields are marked *