ಡಾ.ಬಿ.ಆರ್.ಅಂಬೇಡ್ಕರ್ 135ನೇ ಜಯಂತಿ : ಬಾಬಾ ಸಾಹೇಬರು ಮನುಕುಲದ ವಿಜ್ಞಾನಿ, ವಿಶ್ವಕ್ಕೆ ಜ್ಞಾನದ ಬೆಳಕು..!

ಶಹಾಪುರ,,

ಸಾಮಾನ್ಯವಾಗಿ ಜಯಂತಿ ಕಾರ್ಯಕ್ರಮಗಳಲ್ಲಿ ಡಾ|| ಬಿ.ಆರ್.‌ಅಂಬೇಡ್ಕರ್ ರವರು ಜೀವನ ಚರಿತ್ರೆ, ಅವರ ಹೊರಾಟ, ಅವರ ಬದುಕು-ಬರಹ, ಪಡೆದಿರುವ ಪದವಿ- ಅಧಿಕಾರ, ಸಮಾಜ ಸುಧಾರಣೆಯ ಕೊಡುಗೆಗಳನ್ನು ನೆನಪಿಸಿಕೊಂಡು ಗೌರವ ಸಲ್ಲಿಸುತ್ತೇವೆ ಇದು ರೂಡಿಗತಿಪದ್ದತಿ…

ಬಾಬಾ ಸಾಹೇಬರನ್ನು ಯಾವ ದೃಷ್ಠಿ ಕೋನದಿಂದ ನಾವು ಅವರನ್ನು ಅರ್ಥಾಮಾಡಿಕೊಂಡಿದ್ದೇವೆ. ಅವರು ದೇಶಕ್ಕೆ ಸಮುದಾಯಗಳ ಏಳ್ಗೆಗಾಗಿ ಕೊಟ್ಟಿರುವ ಕೊಡುಗೆಗಳನ್ನು ಕೇವಲ ಸೀಮಿತಿ ರೇಖೆಗೆ ಗುರುತಿಸಿ ಅವರನ್ನು ಒಂದು ಸಮುದಾಯದ ನಾಯಕ, ಹಿತ ಚಿಂತಕ ಎಂದು ಗುರುತಿಸುವ ಪ್ರಯತ್ನಗಳು ಇಂದು ನಮ್ಮ ಮುಂದೆ ಕಾಣುತ್ತಿವೆ. ಈ ಬೆಳವಣಿಗೆ ಬಗ್ಗೆ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.

ಸ್ವತಂತ್ರ್ಯ ಪೂರ್ವದ ಭಾರತದ ವಿದ್ಯಮಾನಗಳನ್ನು ಅರಿತು ಕೊಂಡಾಗ ನಾವು ಕತ್ತಲೆಯ ಭಾರತಕ್ಕೆ ಸಂವಿಧಾನ ಬೆಳಕು ನೀಡಿದ ಸೂರ್ಯ ಎಂದರೆ ತಪ್ಪಾಗಲಾರದು.ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ವರ್ಗಗಳ ಶ್ರೇಣಿಕೃತ ವ್ಯವಸ್ಥೆಯಲ್ಲಿ ಹಲವು ಜಾತಿಯ ಜನರು ಶೇ50 ಜನರು ಕಾರ್ಮಿಕರಾಗಿದ್ದರು. ಸುರಕ್ಷತೆ,ಭದ್ರತೆ, ಕನಿಷ್ಠ ಹಕ್ಕುಗಳು ಇರಲಿಲ್ಲ. ಕೆಲಸದ ಅವಧಿಯು ೧೨ ಗಂಟೆ ಕಾಲವಿತ್ತು. ಇದನ್ನರಿತು ಕೆಲಸ ಅವಧಿಯನ್ನು ೮ ಗಂಟೆ, ಹಕ್ಕುಗಳನ್ನು, ಸುಕ್ಷತೆಯ ಕಾನೂನನ್ನು ಸಮಾನ ವೇತನವನ್ನು ನೀಡಲು ಸಂವಿಧಾನ ಅಡಿಯಲ್ಲಿ ಕಾನೂನುಗಳನ್ನು ತಂದು ಕಾರ್ಮಿಕರ ಕಲ್ಯಾಣಕ್ಕೆ ಕೊಡುಗೆ ನೀಡಿ ಕಾರ್ಮಿಕ ಇಲಾಖೆಗೆ ಜೀವ ತುಂಬಿದ್ದು ಡಾ|| ಬಿ.ಆರ್‌, ಅಂಬೇಡ್ಕರ.ಬಾಬಾ ಸಾಹೇಬರು ಧಾರ್ಮಿಕ ವ್ಯವಸ್ಥೆಯಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸದ, ಹೆಣ್ಣನ್ನು ಪುರುಷರಷ್ಟೆ ಸಮಾನವಾಗಿ ಕಾಣದ ಧರ್ಮವನ್ನು ತ್ಯಜಿಸಿದರು.ಮಹಿಳೆಯರಿಗೆ ಶಿಕ್ಷಣ, ಮದುವೆ, ಮರು ಮದುವೆ ಮತದಾನದ ಹಕ್ಕುಗಳನ್ನು ದಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು,ಮಹಿಳೆಯರನ್ನು ಸಮಾಜದ ಮುನ್ನಲೆಗೆ ಬರಲು ಮಹಿಳೆಗೆ ಸ್ವಾತಂತ್ರ್ಯಬೇಕು ಎಂದು ಬರಲು ಹಲವು ಕಾನೂನುಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿದರು‌.

ಭಾಷಾವಾರು ಪ್ರಾಂತದಿಂದ ಕೂಡಿದ ಭಾರತಕ್ಕೆ ಹಲವು ಜಾತಿ ಧರ್ಮಗಳಿಂದ ಕೂಡಿಧ ರಾಜ್ಯಗಳಲ್ಲಿ ಸಮುದಾಯವು ಬಹುಸಂಖ್ಯಾತರು ಇರುವ ಈ ದೇಶದಲ್ಲಿ ಜಾತಿ – ಧರ್ಮದವರು ಸಹ ಬಾಳ್ವೆ ಸೌಹಾರ್ದತೆಯಿಂದ ಇರಲಿ ಎಂದು ತ ಜಾತ್ಯಾತೀತ ಎಂಬ ಕಾಲಂ ಜಾರಿಗೆ ತಂದರು.

ಬಹು ಸಂಸ್ಕೃತಿಯ ಭಾರತದಲ್ಲಿನ ಜಾತಿ ವ್ಯವಸ್ಥೆ, ಧರ್ಮದಲ್ಲಿರುವ ಕಟ್ಟುಪಾಡುಗಳು ದೂರ ಇಟ್ಟಿರುವ ಹಲವು ಸಮುದಾಯಗಳ ಜನಾಂಗಿಯ ನೋವನ್ನು ಅರಿತು ಒಕ್ಕೂಟ ವ್ಯವಸ್ಥೆಯಲ್ಲಿ ನೊಂದವರಿಗೆ ಅವಕಾಶ, ಸಮಾನತೆ, ಆಧ್ಯತೆ ನೀಡಿ ಅಂವರಿಗೆ ಹಕ್ಕುದಾರರೆಂದು ಸಂವಿಧಾನದಲ್ಲಿ ಕಾಯ್ದೆ ರೂಪಿಸಿದರು.

ವಿಶೇಷವಾಗಿ ಕಾರ್ಮಿಕರಿಗೆ ಮತ್ತು ಮಹಿಳೆಯರಿಗಾಗಿ ನೀಡಿರುವ ಶಿಕ್ಷಣ, ಮತದಾನ, ಆಸ್ತಿಹಕ್ಕು, ಉದ್ಯೋಗದ ಹಕ್ಕು, ಸಮಾನ ವೇತನ, ಕಾರ್ಮಿಕರ ಹಕ್ಕು ಕೇವಲ ದಲಿತ ಮಹಿಳೆಯರು ಕಾರ್ಮಿಕರಿಗೆ ಮಾತ್ರ ಅನುಕೂಲವಾಗಲಿಲ್ಲ. ಭಾರತಿಯ ಮಹಿಳೆಯರಿಗೆ ಭಾರತದ ಕಾರ್ಮಿಕರಿಗೆ ಎಂದು ಮಾಡಲಾಯಿತು. ಒಂದು ಜಾತಿಯನ್ನು ಆಧಾರಗಿಟ್ಟುಕೊಂಡು ಯೋಚಿಸಲಿಲ್ಲ. ಇಂತಹ ಹಲವು ಚಿಂತನೆ, ಕಾಯ್ದೆ-ಕಾನೂನುಗಳನ್ನು ತಿಳಿದುಕೊಂಡಾಗ ನಾವು ಅವರನ್ನು ಮನುಕುಲದ ಸುಧಾರಣೆಯ ಶ್ರಮಿಸಿದ ವಿಜ್ಞಾನಿ ಎಂದು ಕರೆಯಲಾಗುತ್ತದೆ.

ಅಂದು ಭಾರತೀಯರಲ್ಲಿಯೇ ಅತೀ ಹೆಚ್ಚು ಪದವಿ ಪಡೆದಿರುವ ಇವರು ಹಲವು ದೇಶಗಳ ಸಂವಿಧಾನವನ್ನು ಅಧ್ಯಾಯನ ಮಾಡಿದರು. ಧರ್ಮ,ಜಾತಿ, ಆರ್ಥಿಕತೆ, ಭೌಗೊಳಿಕ ವ್ಯವಸ್ಥೆ ಸಾಮಾಜಿಕ ವ್ಯವಸ್ಥೆ ಹಲವು ಆಯಾಮಗಳಿಂದ ಚಿಂತನಾ ಶೀಲರಾಗಿ ಸಮಾಜದ ಸುಧಾರಣೆಗಾಗಿ ತಮ್ಮ ಜೀವನ ಇರುವರೆಗೂ ಹೊರಾಡಿದರು. ಇವರು ಪಡೆದಿರುವ ಪದವಿ ವಿಧ್ಯಾಭ್ಯಾಸದ ಅಂಶಗಳನ್ನು ಗಮನಿಸಿ ಡಾ|| ಬಿ.ಆರ್‌ ಅಂಬೇಡ್ಕರ್ ರವರನ್ನು ಜ್ಞಾನದ ಸಂಕೇತವೆಂದು ಗೌರವಿಸಲಾಗಿದೆ.

ಸ್ವಾತಂತ್ರ್ಯ‌ ನಂತರದ ಭಾರತಕ್ಕೆ ಸಂವಿಧಾನ ಎಂಬ ಚೌಕಟ್ಟಿನಲ್ಲಿ ನಡೆಯಲು ಜಾತ್ಯಾತೀತ, ಸಮಾನತೆ, ಸಹೋದರತೆಗೆ ಸಂವಿಧಾನ ನೀಡಿ ಗೌರವ ಹೆಚ್ಚಿಸಿದರು ಅನ್ನುವುದಕಿಂತ ಈ ಸಂವಿಧಾನದಿಂದ ಕೆಲವು ಪಟ್ಟ ಬದ್ರ ಇತಾಶಕ್ತಿಗಳಿಗೆ ಸಹಿಸಿಕೊಳ್ಳಲು ಆಗದೆ ಭಾರತದ ಸಂವಿಧಾನವನ್ನೆ ಬದಲಾಯಿಸುತ್ತೆವೆ ಎಂದು ಅಪಮಾನಿಸುತ್ತಿರುವುದು ಕೇವಲ ಸಂವಿಧಾನಕ್ಕೆ ಅಲ್ಲಾ, ಅಂಬೇಡ್ಕರ್ ಚಿಂತನೆಯಿಂದ ಸುಧಾರಣೆ ಬೇಕಾಗಿಲ್ಲ. ದೇಶದ ಏಳ್ಗಿಗೆಗೆ ರೂಪಿಸಿದ ಒತ್ತಿಗೆ ನಮಗೆ ಅವಶ್ಯಕತೆ ಇಲ್ಲಾ ಎನ್ನುವಂತಾಗಿದೆ. ನಾವೆಲ್ಲರು ಅರ್ಥಮಾಡಿಕೊಳ್ಳಬೇಕಾಗಿರುವುದು ಕೇವಲ ಅಂಬೇಡ್ಕರ್‌ ಹೆಸರಿನ ಯೋಜನೆ/ಕಾರ್ಯಕ್ರಮಗಳಲ್ಲ.ಅವರ ಚಿಂತನೆಗಳನ್ನು ಉಳಿಸಿ ಬೆಳಸುವ ಸಾಮರಸ್ಯದ ಬದುಕು ನಮಗೆ ಬೇಕಾಗಿದೆ..

ಶಿವಕುಮಾರ.ಬಿ ಶಾಸ್ತ್ರೀ ಶಹಾಪುರ