ನಾಯಕತ್ವ ಹೇಗಿರಬೇಕು ಎನ್ನುವುದಕ್ಕೆ ಕಾನಿಪ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರೆ ಸಾಕ್ಷಿ

ಶಹಾಪುರ,,

ಅಸೂಯೆ, ಅಸಹಕಾರ, ಎಲ್ಲವು ನನಗಿರಲಿ, ಬೇರಾರಿಗೂ ಸಿಗದಿರಲಿ,ತಾ ಮಾಡಿಲ್ಲದಿದ್ದರೂ ನಾನೇ ಮಾಡಿರುವೆ, ಎಲ್ಲರಿಗೂ ನಾನು ಹೇಳುವೆ, ಪದವಿ ಸಿಕ್ಕಾಗ ತಾ ಸಂತಸ ಪಟ್ಟು ಇತರರಿಗೆ ಸಿಕ್ಕಾಗ ಅಸೂಹೆ ಪಡುವುದು,ಪರರ ಬಗ್ಗೆ ನಿಂದಿಸುವುದು, ನಾನೆ ನನ್ನನ್ನು ಮೀರಿಸುವರುಂಟೆ ಎನ್ನುವ ಭಾವನೆ, ಹೊಟ್ಟೆಕಿಚ್ಚು ಪಡುತ್ತಿರುವ ಈ ಜಗದಲ್ಲಿ ನಾವೆಲ್ಲರೂ ಒಂದೆ ನನ್ನವರಲ್ಲಿ ಭೇದಭಾವವೇಕೆ. ನನ್ನವರಲ್ಲಿ ಯಾರಿಗೂ ಪದವಿ, ಪುರಸ್ಕಾರ ದೊರೆತರೂ ನಮಗೆ ದೊರೆತ ಹಾಗೆ ಎನ್ನುವ, ಸಿಗುವುದು ನಮಗೆಲ್ಲರಿಗು ಸಿಗಲಿ ಎನ್ನುವ ವಿಶಾಲ ಮನೋಭಾವನೆ ಇರುವ ವ್ಯಕ್ತಿಗಳು,ನಾಯಕತ್ವ ಹೇಗಿರಬೇಕು ಎನ್ನುವುದಕ್ಕೆ ಕಾನಿಪ ಜಿಲ್ಲಾಧ್ಯಕ್ಷ ಮತ್ತು ಶಹಾಪುರ ತಾಲೂಕು ಅಧ್ಯಕ್ಷರೇ ಸಾಕ್ಷಿ.

ಮನಸ್ಸು ಮಾಡಿದ್ದರೆ ಈ ಹಿಂದೆ ಅನೇಕ ಪ್ರಶಸ್ತಿ ತೆಗೆದುಕೊಳ್ಳಬೇಕಿತ್ತು.ನನ್ನವರಿಗೆ ಸಿಗಲಿ ಎಂದು ಸದಾ ಸಂಘದ ಸದಸ್ಯರ ಹಿತ ಕಾಯುವ ಇವರ ಕಾರ್ಯ ಶ್ಲಾಘನೀಯ..

ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರು ಅವರು,ಶಹಾಪುರದಿಂದ ಬೀದರ್ ಗೆ ತಡವಾಗಿ ಬಂದ ನನ್ನನ್ನು ಅಕ್ಕರೆಯಿಂದ ಉಣಬಡಿಸಿ ಸಭಾ ಮಂಟಪಕ್ಕೆ ಕರೆದೊಯ್ದ ರೀತಿ ನಿಜಕ್ಕೂ ಶ್ಲಾಘನೀಯ.ಅಧ್ಯಕ್ಷರಿಗೆ ನಮನಗಳು.

ಬೇರಿರದ ಮರವಾದ ಬದುಕು, ಅನಿಶ್ಚಿತ ಇಲ್ಲದ ಬದುಕು ನನ್ನದು. ಅರಿವಿನ ಆಲದಾಸರೆಯ ಬಯಸಿ ಕವಲುಪಥ, ಶೂನ್ಯವಾಗಿ ಕುಳಿತಿರುವೆ.ಬಳಿಕರೆದು ಮಗುವೆಂದು ಮೈದಡವಿ ನಗುಮೊಗದಿ ಪರಿಚಿತನಂತೆ ವಾತ್ಸಲ್ಯ ತೋರಿದಿರಿ ನೀವು. ಅಕ್ಕರೆಯಿಂದ ಊಟವನಿತ್ತು ಹಸಿವನಿಂಗಿಸಿದ ಅಚ್ಚರಿ.
ನೋಟದಿಂದೆನ್ನ ಕುಳ್ಳರಿಸಿ ಜಾತಿ-ಮತ ಪಂಥಗಳ ಮೀರಿ ಭಳೆಯಿರಿ ಅನುಗಾಲ ನಿನ್ನೊಂದಿಗಿರುವೆ ಎಂದೆನುತ ಹರಿಸಿದಿರಿ  ನೀವು….

 

Leave a Reply

Your email address will not be published. Required fields are marked *