ಶಹಾಪುರ,,
ತಾಲೂಕಿನ ವಿಜಯ ಗ್ಯಾಸ್ ಏಜೆನ್ಸಿಯ ಮುಂದೆ ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುತ್ತಿರುವುದು ಮುಂದುವರೆದಿದೆ.ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಶಹಪುರದ ವಿಜಯ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಬೇಕಾಬಿಟ್ಟಿಯಾಗಿ ಸರದಿ ಸಾಲಿನಲ್ಲಿ ನಿಂತು ಸಿಲಿಂಡರ್ ತೆಗೆದುಕೊಳ್ಳುತ್ತಿರುವುದು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದರು.

ಗ್ರಾಹಕರು ಗ್ಯಾಸ್ ತೆಗೆದುಕೊಂಡು ಹೋಗುವಾಗ ಅಪಘಾತವಾದರೆ ಇದಕ್ಕೆಲ್ಲ ಯಾರು ಹೊಣೆ ಎಂದು ಕಿಡಿಕಾರಿದ್ದರು. ನಂತರ ನೋಟಿಸ್ ಜಾರಿ ಮಾಡಿದ್ದರು. ಜಿಲ್ಲಾಧಿಕಾರಿಗಳ ನೋಟೀಸ್ ಗೆ ಏಜೆನ್ಸಿಗಳು ಕ್ಯಾರೆ ಎನ್ನುತ್ತಿಲ್ಲ. ಗ್ರಾಹಕರ ಸರದಿ ಸಾಲು ಮುಂದುವರೆದಿದೆ. ಏಜೆನ್ಸಿ ಅಂಗಡಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಗ್ರಾಹಕರು ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುತ್ತಿದ್ದಾರೆ. ಗ್ರಾಹಕರ ಪೋನ್ ನಂಬರಿಗೆ ಬರುವ ಮೆಸೇಜ್ ಬಂದಿದ್ದನ್ನು ಏಜೆನ್ಸಿಗಳು ಗಮನಿಸಿ ಮೊದಲು ಬಂದಿರುವ ಅಥವಾ ಆ ದಿನಾಂಕದಂದು ಬಂದಿರುವ ಮೆಸೇಜ್ ಗಳನ್ನು ಆಧರಿಸಿ ಸಿಲಿಂಡರ್ ಗಳನ್ನು ಮನೆಗೆ ತಲುಪಿಸುವ ಜವಾಬ್ದಾರಿ ಏಜೆನ್ಸಿಯವರದಾಗಿರುತ್ತದೆ. ಏರಿಯಾಗಳಿಗೆ ತೆಗೆದುಕೊಂಡು ಹೋಗಿರುವ ಏಜೆನ್ಸಿಯವರು ಮೊದಲು ಬಂದ ಗ್ರಾಹಕರಿಗೆ ಸಿಲಿಂಡರಗಳನ್ನು ಕೊಟ್ಟು ಹೋಗುತ್ತಾರೆ. ಮನೆಗೆ ತೆರಳಿ ಸಿಲಿಂಡರ್ ತಲುಪಿಸುವುದಿಲ್ಲ. ಮೆಸೇಜ್ ಗಳ ಹಾಗೂ ದಿನಾಂಕಗಳ ಆಧಾರದ ಮೇಲೆ ಬಂದಿರುವ ಮೆಸೇಜ್ ಗಳನ್ನು ಆಧರಿಸಿ ಗಳನ್ನು ತಲುಪಿಸುತ್ತಿಲ್ಲ.ಸಿಲಿಂಡರ್ ಖಾಲಿಯಾಗಿವೆ ನಾಳೆ ಬರುವೆ ಎಂದು ಹೇಳುತ್ತಾರೆ. ಇದರಿಂದ ದಿನದಿಂದ ದಿನಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದಲೇ ನಾವೆ ಗ್ಯಾಸ್ ಏಜೆನ್ಸಿಯ ಅಂಗಡಿಗೆ ಬಂದು ಸಿಲಿಂಡರ್ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ನಗರದಲ್ಲಿ ಹಳೆ ಬಸ್ ನಿಲ್ದಾಣ ಮತ್ತು ಡಾ. ಸಿನ್ನೂರು ಆಸ್ಪತ್ರೆಯ ಮುಂದೆ ಇರುವ ಏಜೇನ್ಸಿಯ ಅಂಗಡಿ ಮುಂದೆಯೂ ಕೂಡ ಸರದಿ ಸಾಲು ಮುಂದುವರೆದಿವೆ.ಜಿಲ್ಲಾಧಿಕಾರಿಗಳ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಲಾಗಿದೆ. ಜಿಲ್ಲಾಧಿಕಾರಿಗಳ ಆದೇಶಗಳನ್ನು ಪಾಲಿಸದ ಏಜೇನ್ಸಿಯವರು ನಮ್ಮ ಮಾತನ್ನು ಕೇಳಲು ಸಾಧ್ಯವೇ ಎನ್ನುತ್ತಾರೆ ಗ್ರಾಹಕರು..