ವಡಗೇರಾ ತಾಲೂಕಿನಲ್ಲಿ ಸಿಲೆಂಡರ್, ಪೆಟ್ರೋಲ್ ಕೊರತೆ ಇಲ್ಲ 

ವಡಗೇರಾ:

ಮಧ್ಯ ಪ್ರಾಚ್ಯ ಯುದ್ದದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಡುಗೆ ಅನಿಲ ಹಾಗೂ ಡೀಸೆಲ್ ಪೆಟ್ರೋಲ್ ಕೊರತೆ ಉಂಟಾಗಲಿದೆ ಎಂಬ ವದಂತಿಯನ್ನು ಯಾರು ನಂಬಬಾರದು. ತಾಲೂಕಿನಲ್ಲಿ ಸಮಸ್ಯೆ ಇಲ್ಲ ಎಂದು ತಹಸೀಲ್ದಾರ್ ಮಂಗಳಾ ಎಂ ಸ್ಪಷ್ಟಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ಯಾಸ್ ಸಿಲೆಂಡರ್ ಸಿಗುವುದಿಲ್ಲ ಎಂದು ಸಾರ್ವಜನಿಕರು ಭಯ ಬಿದ್ದು ಇಂಡಿಯನ್ ಗ್ಯಾಸ್ ಏಜೆನ್ಸಿ ಮುಂದೆ ಜನಗಳು ಸಾಲುಗಟ್ಟಿ ನಿಂತಿದ್ದು, ಇಂಡಿಯನ್ ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಬಂಕ್ ಮಾಲೀಕರಿಂದ ಮಾಹಿತಿ ಪಡೆದಿದ್ದು ಗ್ಯಾಸ್ ಡೀಸೆಲ್ ಪೆಟ್ರೋಲ್ ಸಮಸ್ಯೆ ಇಲ್ಲ. ಜನರೇ ಭಯಗೊಂಡು ಪೆಟ್ರೋಲ್ ಬಂಕ್ ಸಿಲೆಂಡರ್ ಗ್ಯಾಸ್ ಏಜೆನ್ಸಿಗಳ ಮುಂದೆ ಮುಗಿ ಬೀಳುತ್ತಿದ್ದಾರೆ ಎಂದು ಮಾಲೀಕರು ತಿಳಿಸಿದ್ದಾರೆ.ಯಾವುದೇ ಆತಂಕ ಬೇಡ ಮನೆಯಲ್ಲಿಯೇ ಕುಳಿತು ಸಿಲಿಂಡರ್ ಗಳನ್ನು ಬುಕ್ ಮಾಡಿ ಏಜೆನ್ಸಿ ಅವರೇ ನಿಮ್ಮ ಮನೆಗಳಿಗೆ ತಲುಪಿಸುವಂತೆ ತಿಳಿಸಲಾಗಿದೆ. ಯಾವುದೇ ರೀತಿಯ ಸಿಲಿಂಡರ್ ಗಳ ಕೊರತೆ ಇಲ್ಲ. ಮನೆ ಮನೆಗೆ ಸಿಲೆಂಡರ್ ಸರಬರಾಜು ವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Leave a Reply

Your email address will not be published. Required fields are marked *