ಪಶು ವೈದ್ಯಾಧಿಕಾರಿ ಗುಂಡಾವರ್ತನೆ ಆರೋಪ,ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆಗ್ರಹ

ಶಹಾಪುರ :

ರೈತರ ಜಾನುವಾರುಗಳ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ರೈತರ ಮನೆ ಮನೆಗಳಿಗೆ ತಲುಪಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಸದುದ್ದೇಶದಿಂದ ಪಶು ತುರ್ತು ಚಿಕಿತ್ಸೆ 1962 ವಾಹನ ಸೌಲಭ್ಯ ಒದಗಿಸಲಾಗಿದ್ದು,ಅದರ ಸೇವೆಗೆ ಹಾಜರಾಗಿದ್ದ ಪಶು ವೈದ್ಯಾಧಿಕಾರಿ ಡಾ ರಾಜೇಶ್ ಗುವಾ ಎಂಬುವವರು ರೈತರ ಮೇಲೆ ಗುಂಡಾವರ್ತನೆ ತೋರಿಸಿರುವ ಆರೋಪದೊಂದಿಗೆ ತಾಲೂಕ ರೈತ ಸಂಘಟನೆ ಪದಾಧಿಕಾರಿಗಳು ತಾಲೂಕ ಪಶು ವೈದ್ಯಾಧಿಕಾರಿಯನ್ನು ಅಮಾನತ್ತುಗೊಳಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ವೈದ್ಯಾಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಕ್ರಿಮಿನಲ್ ಮುಖದ್ದಮೆ ಹಾಕಿ ನ್ಯಾಯಾಂಗ ಬಂಧನಕ್ಕೊಳಪಡಿಸಬೇಕೆಂದು ಒತ್ತಾಯಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಎಸ್ ಹಗರಟಗಿ, ಉತ್ತರ ಕರ್ನಾಟಕ ಅಧ್ಯಕ್ಷ ದೇವೇಂದ್ರಪ್ಪ ಪೊಲೀಸ್ ಪಾಟೀಲ ತಾಲೂಕ ಅಧ್ಯಕ್ಷ ಧರ್ಮರಾಜ ಎಂ ತಹಶೀಲ್ದಾರ್.ಉಪಾಧ್ಯಕ್ಷ ದೇವೇಂದ್ರಪ್ಪ ಕೋಲ್ಕರ, ಶಂಕರ ಕಟ್ಟಿಮನಿ,ಬಸವರಾಜ ಗಾಂಜಿ,ಪ್ರವೀಣ ಕುಮಾರ ಶಖಾಪುರ, ಧರ್ಮರಡ್ಡಿ ಕನ್ಯಾಕೊಳೂರು ಸೇರಿದಂತೆ ರೈತ ಸೇನೆಯ ಸದಸ್ಯರು ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *