ಸಚಿವ ದರ್ಶನಾಪುರ ಹೇಳಿಕೆ | ನಗರ ನಿರಾಶ್ರಿತರಿಗೆ ಶೀಘ್ರದಲ್ಲಿಯೇ ೧೦೦೦ ನಿವೇಶನಗಳು-ಸಚಿವ ದರ್ಶನಾಪುರ!

ಶಹಾಪುರ,

ನಗರದಲ್ಲಿ ಯಾದಗಿರಿ ರಸ್ತೆಗೆ ಹೊಂದಿಕೊಂಡಿರುವ 50 ಎಕರೆ ಜಮೀನು ರಾಜೀವ್‌ಗಾಂಧಿ ವಸತಿ ಯೋಜನೆಗಾಗಿ ಪಡೆಯಲು ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಜಮೀನು ಲಭ್ಯವಾದಲ್ಲಿ 1000 ನಿವೇಶನಗಳನ್ನು ಸಿದ್ದಗೊಳಿಸಿ ನಗರದ ನಿರಾಶ್ರಿತ ಕುಟುಂಬಗಳಿಗೆ ನೀಡಬಹುದಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರಸಭೆ ಸಭಾಂಗಣದಲ್ಲಿ ಬುಧವಾರ ನಗರ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ, ಈ ಕುರಿತು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪತ್ರ ಬರೆದಿದ್ದು ಸಂಬಂಧಿಸಿದ ರೇಷ್ಮೆ ಇಲಾಖೆ ಸಚಿವರೊಂದಿಗೆ ಮಾತನಾಡಿದ್ದೇನೆಂದು ತಿಳಿಸಿದರು.
ಈಗಾಗಲೇ ನಗರದಲ್ಲಿನ ನಿರಾಶ್ರಿತ ಕುಟುಂಬಗಳು ನಿವೇಶನ ಕೋರಿ ಸುಮಾರು 4000ಅರ್ಜಿಗಳು ಬಂದಿದ್ದು,ಅದನ್ನು ನಗರಸಭೆ ಅಧಿಕಾರಿಗಳು ಹಾಗೂ ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಜಂಟಿಯಾಗಿ ಪ್ರತಿ ಅರ್ಜಿದಾರರ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ 800ಕ್ಕೂ ಅಧಿಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು.ಕೆಲವರಿಗೆ ಈಗಾಗಲೇ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು ಇನ್ನೂ ಹಲವರಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.
ಕೊಳಚೆ ನಿರ್ಮೂಲನ ಮಂಡಳಿಯಲ್ಲಿನ 200ಮನೆಗಳನ್ನು ಸರಕಾರದ ಹೊಸ ಮೀಸಲಾತಿಯನ್ವಯ 136ಪಜಾತಿ,ಪಪಂ,44ಸಾಮಾನ್ಯ,20ಅಲ್ಪಸಂಖ್ಯಾತರಿಗೆ ಹಂಚಿಕೆ ಮಾಡಬೇಕಾಗಿದ್ದು ಪಟ್ಟಿ ಸಿದ್ದಪಡಿಸಲಾಗಿದೆ ಎಂದರು.2021-22ನೇ ಸಾಲಿನಲ್ಲಿ 774ಮನೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರದ ₹1.70ಲಕ್ಷ ಬಿಡುಗಡೆಯಾಗಿದ್ದು ಕೇಂದ್ರ ಸರಕಾರದ ₹1.50ಲಕ್ಷ ಇನ್ನೂ ಬಿಡುಗಡೆಯಾಗಿಲ್ಲದ ಕಾರಣ ಇನ್ನೊಮ್ಮೆ ಪಟ್ಟಿ ಕಳುಹಿಸಲಾಗುವುದು. ಹತ್ತಿರದ ಕೃಷ್ಣ ಅಚ್ಚುಕಟ್ಟು ಪ್ರದೇಶದ ಕೆಂಚನಕವಿ ಗ್ರಾಮದಲ್ಲಿ 9ಎಕರೆಯಲ್ಲಿ ನಿವೇಶನಗಳು ಹಾಗೂ ಹುಲಕಲ್ ಗ್ರಾಮದಲ್ಲಿ 351ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ರೇಡ್೨ ತಹಸೀಲ್ದಾರ್ ಪ್ರಸನ್ನ ಮೋಗೆಕರ್,ಪೌರಾಯುಕ್ತ ಜೀವನ್ ಕಟ್ಟಿಮನಿ,ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುಕರ್,ನಗರಸಭೆ ಎಇಇ ನಾನಾ ಸಾಹೇಬ್ ಮಡಿವಾಳಕರ್,ಪರಿಸರ ಅಭಿಯಂತರ ಹರೀಶ್ ಸಜ್ಜನ್‌ಶೆಟ್ಟಿ,ಭೀಗುಡಿ ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಯೂಸೂಫ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
 ನಗರ ಆಶ್ರಯ ಸಮಿತಿ ಸಭೆಯಲ್ಲಿ ಕೇವಲ ನಗರಸಭೆ ಅಧಿಕಾರಿಗಳಿಂದ ಕೂಡಿತ್ತು.ಆಶ್ರಯ ಸುತ್ತೋಲೆ ಪ್ರಕಾರ ಯಾವುದೆ ಆಶ್ರಯಸಮಿತಿ ನಾಮನಿರ್ಧೆಶನ ಸದಸ್ಯರ ಇಲ್ಲದೆ ಮತ್ತು ಆಶ್ರಯ ಸಮಿತಿ ಸದಸ್ಯ ಅಧಿಕಾರಿಗಳು ಗೈರು ಹಾಜರಿಯಾಗಿದ್ದು, ಆಡಳಿತ ರೂಢ ಸರ್ಕಾರವಿದ್ದರೂ ಇಂದಿವರೆಗೂ ಯಾವುದೆ ನಾಮಿರ್ಧೇಶನ ಸದಸ್ಯರು ನೇಮಕಗೊಂಡಿರುವದಿಲ್ಲ.ಈ ಸಭೆಯಲ್ಲಿ ಯಾವುದೆ ಕೊರಂ, ಭರ್ತಿಯಾಗದೆ ಆಶ್ರಯ ನಿರ್ಣಾಯಕಗಳನ್ನು ತೆಗೆದುಕೊಂಡಿದ್ದು ಅವುಗಳನ್ನು ರದ್ದುಗೊಳಿಸಿ ಪೂರ್ಣಪ್ರಮಾಣದ ಆಶ್ರಯ ಸಮಿತಿಯಾಗುವವರೆಗೂ ಆಶ್ರಯ ನಿವೇಶನಗಳ ಹಂಚಿಕೆಯನ್ನು ಕೈ ಬೀಡಬೇಕು.ಪತ್ರಿಕೆಗಳಲ್ಲಿ ಸುಳ್ಳು ಹೇಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ.ಮನೆ-ಮನೆ ಪರೀಶೀಲನೆ ಮಾಡಿದ ೮೦೦ ಫಲಾನುಭವಿಗಳಿಗೆ ಇಲ್ಲಿಯವರೆಗೂ ಯಾವುದೆ ನಿವೇಶನ ನೀಡಿರುವುದಿಲ್ಲ,.ಕೆಲವರಿಗೆ ನಿವೇಶನ ನೀಡಲಾಗಿದೆ ಎಂದು ಪ್ರಕಟಣೆ ನೀಡಿದ್ದು ಸತ್ಯಕ್ಕೆ ದೂರವಾದದ್ದು ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.