ಭೀ.ಗುಡಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಒತ್ತಾಯ

ಶಹಾಪುರ,,

ತಾಲೂಕಿನ ಭೀಮರಾಯನ ಗುಡಿಯ ಶಖಾಪುರ ಕ್ರಾಸ್ ಕಮಾನ್ ಎಡಭಾಗದಲ್ಲಿ ಕೃಷ್ಣಾ ಕಾಡಾ ಅಧೀನದ ಭೂಮಿಯಲ್ಲಿ ಪ್ರಜಾಸೌಧ ನಿರ್ಮಿಸಬೇಕೆಂದು ಒತ್ತಾಯಿಸಿ ಶಖಾಪುರ ಗ್ರಾಮಸ್ಥರು ಹಾಗೂ ಭಿ.ಗುಡಿ ನಿವಾಸಿಗಳು ಶುಕ್ರವಾರ ತಹಸಿಲ್ ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸ್ಥಳ ಶಹಾಪುರ ಮತ ಕ್ಷೇತ್ರದ ಜನತೆಗೆ ಮಧ್ಯಭಾಗದಲ್ಲಿದ್ದು, ಸುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಶಖಾಪುರ ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ ಸುತ್ತಲಿನ ಗ್ರಾಮಸ್ಥರಿಗೂ ಭೀಮರಾಯನ ಗುಡಿಗೆ ಬರಲು‌ ಬಸ್ ಸೌಲಭ್ಯ ಸಾಕಷ್ಟಿದೆ. ಅಲ್ಲದೆ ಭೀಮರಾಯನ ಗುಡಿಯಲ್ಲಿ ಕೃಷ್ಣಾ ಭಾಗ್ಯ ಜಲ‌ನಿಗಮ ಕೇಂದ್ರ ಕಚೇರಿ ಸ್ಥಾಪನೆ ವೇಳೆ ಶಖಾಪುರ ಸೇರಿದಂತೆ ಸುತ್ತಲಿನ‌ವರು ಸಾಕಷ್ಟು ಭೂಮಿ ಸರ್ಕಾರಕ್ಕೆ ನೀಡಿದ್ದು,‌ಇದೀಗ ಸರ್ಕಾರ ಪ್ರಜಾಸೌಧ ನಿರ್ಮಾಣವಾದಲ್ಲಿ ಇಷ್ಟು ವರ್ಷ ಭೂಮಿ ಕಳೆದುಕೊಂಡ ರೈತರಿಗೂ ಅನುಕೂಲವಾಗಲಿದೆ ಎನ್ನುವುದು ಗ್ರಾಮಸ್ಥರು ಅಳಿಸಲಾಗಿದೆ.

ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ ಸಿದ್ಧಾರೂಢ ಬನ್ನಿಕೊಪ್ಪ,‌ ಈಗಾಗಲೇ ಭೀಮರಾಯನ ಗುಡಿಯಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕೆ ಸೂಕ್ತ ಜಾಗ ಸರ್ವೇ ನಡೆಸಿದ್ದು,‌ಸರ್ಕಾರದ ಅನುಮತಿಗೆ ಕಳುಹಿಸಲಾಗಿದೆ. ಇಷ್ಟರಲ್ಲಿಯೇ ಅನುಮೋದನೆ ದೊರೆತಲ್ಲಿ ನಿಮ್ಮ‌ ಆಸೆಯಂತೆ ಭೀ.ಗುಡಿಯಲ್ಲಿಯೇ ಪ್ರಜಾಸೌಧ ನಿರ್ಮಾಣವಾಗಲಿದೆ. ನೀವು ಸಲ್ಲಿಸಿದ ಬೇಡಿಕೆಯುಳ್ಳ ಮನವಿ ಪತ್ರ ಸರ್ಕಾರದ ಗಮನಕ್ಕೆ ತರಲಾಗುವದು ತಿಳಿಸಿದರು.

ಈ ಸಂದರ್ಭದಲ್ಲಿ ದೇವು ನಾಯಕ‌ ಗಂಗನಾಳ, ಚನ್ನಬಸಪ್ಪಗೌಡ ಪೋ.ಪಾಟೀಲ್ ಶಖಾಪುರ,‌ ಶಿವರಡ್ಡೆಪ್ಪಗೌಡ ಗೋಗಿ, ರಾಘವೇಂದ್ರ ಪೂಜಾರಿ, ಕಳಸಪ್ಪಗೌಡ ಮಾಲಿ‌ ಪಾಟೀಲ್ ಶಖಾಪುರ, ದೇವೆಗೌಡ ಪಾಟಿಲ್ ದಿಗ್ಗಿ, ಸಂಜೀವ್ ಪೂಜಾರಿ, ಶ್ರೀಧರ ಪೂಜಾರಿ, ರಘಾವೇಂದ್ರ ಪೋ.ಪಾಟೀಲ್, ಶರಣಗೌಡ ಮಾಲಹಳ್ಳಿ, ಮಲ್ಲಿಕಾರ್ಜುನ ಪುಜಾರಿ,‌ ನಿಜಗುಣ ಪೂಜಾರಿ, ಮಾಳಪ್ಪ ಪೂಜಾರಿ,‌ ಬಸವಲಿಂಗಪ್ಪ ಸಾಹು,‌ ಸಂದೀಪ ಪೂಜಾರಿ,‌ ಶಿವನಗೌಡ ಗೋಗಿ, ಮುದಕಪ್ಪ ಸಾಹೇಬಗೌಡ, ‌ದೇವಪ್ಪ ಸಗರ,‌ದೊಡ್ಡಣಗೌಡ, ನೆಹರು ದೊಡ್ಡ ತಾಂಡಾ ಇತರರಿದ್ದರು.

Leave a Reply

Your email address will not be published. Required fields are marked *