ಪೋನ್ ಇನ್ ಕಾರ್ಯಕ್ರಮ | ಮಾರ್ಚ್ 18 ರಿಂದ ಎಸ್ ಎಲ್ ಸಿ ಪರೀಕ್ಷೆ ಆರಂಭ :  ಪರೀಕ್ಷೆಗೆ ಭಯ ಪಡುವ ಅಗತ್ಯವಿಲ್ಲ  : ಸಿಇಒ ಲವೀಶ್ ಒರಡಿಯಾ 

ಯಾದಗಿರಿ,,

ಮಾ. 18 ರಿಂದ ಏಪ್ರೀಲ್ 02 ವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಯುಕ್ತ ಓದುತ್ತಿರುವ ಮಕ್ಕಳಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸಲು ಹಾಗೂ ವಾರ್ಷಿಕ ಪರೀಕ್ಷೆಗೆ ತಯಾರಿಗಾಗಿ ಪೂರ್ವ ಸಿದ್ದತಾ ಪರೀಕ್ಷೆ, ವಿಶೇಷ ತರಗತಿ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ.ಮಕ್ಕಳು ಸೂಕ್ತ ತಯಾರಿಯಾಗಿದ್ದಲ್ಲಿ ಪರೀಕ್ಷೆಗೆ ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗ ಲವೀಶ್ ಒರಡಿಯಾ ಹೇಳಿದರು. ಕನ್ನಡ ಪ್ರಭ ದಿನ ಪತ್ರಿಕೆ ಆಯೋಜಿಸಿರುವ SSLC ಪರೀಕ್ಷಾ ಸಿದ್ದತೆ ಕುರಿತು ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿ ಮತ್ತು ಪಾಲಕರ ಕರೆಗಳನ್ನು ಸ್ವೀಕರಿಸಿ ಮಾತನಾಡಿದರು.

ಪೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರೆ ಮಾಡಿದ ಮಕ್ಕಳು ಪರೀಕ್ಷೆ ತಯಾರಿ ಕುರಿತು ಮಾತನಾಡಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.ಪಾಲಕರು ಸಹ ಕರೆಮಾಡಿ SSLC ಪಲಿತಾಂಶ ಹೆಚ್ಚಿಸಲಿ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಲವರು ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಓ ತಾಲೂಕ ಮತ್ತು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣ ಪಾಲಕರು ಕಲ್ಪಿಸಿ ನೋಡಬೇಕು. ಮೊಬೈಲ್, ಟಿ.ವಿ.ಗಳಿಂದ ಮಕ್ರಕಳೂ ದೂರ ಇರುವಂತೆ ನೋಡಿ ಕೊಳ್ಳಿ ಎಂದು ಪಾಲಕರಲ್ಲಿ ವಿನಂತಿ ಮಾಡಿಕೊಂಡರು.ಪ್ರಸ್ತುತ ವರ್ಷ SSLC ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಶುಭ ಕೋರಿ ಒಳ್ಳೆಯ ಅಂಕಗಳನ್ನು ಗಳಿಸಿ ಪಾಲಕರಿಗೆ ಮತ್ತು ಶಾಲೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಪ ನಿರ್ದೇಶಕರಾದ ಚನ್ನಬಸಪ್ಪ ಮುದೋಳ್ ಹಾಗೂ ಇಲಾಖೆಯ ತಂಡವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪಯುಕ್ತ ಮಾಹಿತಿ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡಿದರು.ಕನ್ನಡ ಪ್ರಭ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ  ಆನಂದ ಸೌಧಿಯವರು ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು.