ಅಭಿವೃದ್ಧಿ ಹೆಸರಿನಡಿ ಚುನಾವಣೆ ಎದುರಿಸುವ ಶಕ್ತಿ ಬಿಜೆಪಿ ಪಕ್ಷಕ್ಕಿಲ್ಲ: ಶರಣಬಸಪ್ಪಗೌಡ ದರ್ಶನಾಪುರ

ಶಹಾಪುರ:ರಾಷ್ಟ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಅಭಿವೃದ್ಧಿ ವಿಷಯದ ಆಧಾರದ ಮೇಲೆ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಾರೆ ಎಂದು ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಇಂದು ನಗರದ ಹಳಿಸಗರ ರಸ್ತೆಯಲ್ಲಿನ ಮಲ್ಲಯ್ಯ ದೇವಸ್ಥಾನದ ಹತ್ತಿರ ಇರುವ ಸಿ.ನಂ.120 ರಲ್ಲಿನ ಆಶ್ರಯ ನೀವೇಶನಗಳ ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಿಷಯಾಧಾರಿತ ಮತ್ತು ಅಭಿವೃದ್ಧಿಯಡಿ ಚುನಾವಣೆ ಎದುರಿಸಲು ಬಿಜೆಪಿ ಪಕ್ಷದವರಿಗೆ ಇಲ್ಲ.ಅಭಿವೃದ್ಧಿ ವಿಷಯ ಹೇಳುವ ನೈತಿಕತೆಯು ಬಿಜೆಪಿ ಪಕ್ಷದವರಿಗಿಲ್ಲ.ಇಂದು ರೈತರು ಬೀದಿಗೆ ಬಂದಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುತ್ತೇನೆಂದು ಹೇಳಿದ ಪ್ರಧಾನಿ ಮೋದಿಯವರು ರಾಜಧಾನಿ ದೆಹಲಿಯಲ್ಲಿ ಸುಮಾರು ಒಂದು ವರ್ಷದವರೆಗೆ ಪ್ರತಿಭಟಿಸುತ್ತಿದ್ದ ರೈತರನ್ನು ಭೇಟಿ ಮಾಡಲಿಲ್ಲ. ಕನಿಷ್ಠಪಕ್ಷ ಕೇಂದ್ರ ಸಚಿವರಾದರು ಬೇಟಿ ಕೊಡಲಿಲ್ಲ. ಇಂತಹವರಿಂದ ರೈತರ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ?.ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲ. ರಸಗೊಬ್ಬರ ಮತ್ತು ಬೀಜ ಸೇರಿದಂತೆ ಅವುಗಳ ದರ ದುಪ್ಪಟ್ಟಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಎಂಟು ವರ್ಷದಲ್ಲಿ ರಾಷ್ಟದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರಕಾರದ ಸಾಧನೆ ಶೂನ್ಯ. ಒಂದೇ ಮಾತು ಹೇಳುತ್ತಾರೆ. “ಭಾರತ ಎಲ್ಲಿತ್ತು ಎಲ್ಲಿಗೆ ಹೋಗಿದೆ”ಎಂದು ಮಾರ್ಮಿಕವಾಗಿ ನುಡಿದರು.

ಉಜ್ವಲ ಯೋಜನೆಯಡಿ ವಿತರಿಸುತ್ತಿರುವ ಉಚಿತ ಗ್ಯಾಸ್ ಸಿಲಿಂಡರ್ ಸ್ಥೀತಿ ಹೇಗಾಗಿದೆ ನೋಡಿ. ಉಚಿತ ಗ್ಯಾಸ್ ಸಿಲಿಂಡರ್ ಕೊಟ್ಟರು.ಆದರೆ ಇಂದು ಅದರ ಬೆಲೆ 1080 ರೂಪಾಯಿ ಹೆಚ್ಚಳ ಮಾಡಲಾಗಿದೆ.ಇದೊಂದು ಸಾಧನೆಯೇನು ?, ಬಡವರಿಗೆ, ಕೂಲಿಕಾರ್ಮಿಕರಿಗೆ ಗ್ಯಾಸ್ ಸಿಲಿಂಡರನ್ನು ವರ್ಷದಲ್ಲಿ ಆರು ಸಿಲಿಂಡರ್ ಉಚಿತವಾಗಿ ಕೊಡಿ ಎಂದು ಹೇಳಿದರು.

ಕರೋನಾ ಸಂದರ್ಭದಲ್ಲಿ ರೈತರ ಸಾಲ ಮನ್ನ ಮಾಡಬೇಕಿತ್ತು.ಬಡವರು ಮತ್ತು ರೈತರು ಯಾವತ್ತೂ ಮೋದಿಯವರಿಗೆ ಕಾಣುವುದಿಲ್ಲ. ಶ್ರೀಮಂತರು ಮಾತ್ರ ಕಾಣುತ್ತಾರೆ. ಅದಕ್ಕಾಗಿ ಅವರ ಸಾಲ ಮನ್ನಾ ಮಾಡಿದ್ದಾರೆ.

ಆಪರೇಷನ್ ಕಮಲ ಬಂದಿದ್ದೆ ಬಿಜೆಪಿ ಪಕ್ಷದವರಿಂದ.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಯಾವತ್ತೂ ಶಾಸಕರನ್ನು ಖರೀದಿ ಮಾಡಿ ರಾಜಕೀಯ ಮಾಡಿಲ್ಲ.ಆದರೆ ಬಿಜೆಪಿ ಪಕ್ಷ ಶಾಸಕರಿಗೆ ಹಣದ ಆಮಿಷ ತೋರಿಸಿ, ಆಪರೇಷನ್ ಕಮವ ಎನ್ನುವ ಹೆಸರಿನಡಿ ಶಾಸಕರನ್ನು ಖರೀದಿಸಿ, ರಾಜಿನಾಮೆ ಕೊಡಿಸಿ, ಅಧಿಕಾರ ಹಿಡಿದು, ನಂತರ ಅದೇ ಶಾಸಕರಿಗೆ ಸಚಿವಗಿರಿ ಕೊಟ್ಟು, ಚುನಾವಣೆಯಲ್ಲಿ ಗೆಲ್ಲಿಸುವರು. ಆಪರೇಷನ್ ಕಮಲ ಎನ್ನುವುದು ಬಂದಿದ್ದೆ ಕರ್ನಾಟಕ ರಾಜ್ಯದಿಂದ. ಇದು ರಾಷ್ಟ್ರಾದ್ಯಂತ ಮುಂದುವರೆದಿದ್ದು ನಾಚಿಕೆಯ ಸಂಗತಿಯಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಬಿಜೆಪಿ ಪಕ್ಷ ಒಂದು ಸಾರಿಯಾದರೂ ಸ್ಪಷ್ಟ ಬಹುಮತ ಪಡೆದಿದೆಯಾ?.112 ಸ್ಥಾನದಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದುಂಟಾ ಎಂದು ಮೂದಲಿಸಿದರು.

About The Author