ಕೆ.ಬಿ.ರಾಜು….
ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹಾಗೂ ಅಮೆರಿಕದ ಹಸ್ತಕ್ಷೇಪದಿಂದಾಗಿ ಮೂರನೇ ಮಹಾಯುದ್ಧಕ್ಕೆ ತಿರುಗಿ ಜಗತ್ತೆ ಸರ್ವ ನಾಶವಾಗಬಹುದ ಈ ಸಂಘರ್ಷ ಪರಮಾಣು ಯುದ್ಧಕ್ಕೆ ತಿರುಗಿದರೆ, ಇಡೀ ಭೂಮಿಯ ವಿನಾಶ ನಿಶ್ಚಿತ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ವಿಜ್ಞಾನ ಪತ್ರಿಕೆ ‘ನೇಚರ್’ ನಲ್ಲಿ ಪ್ರಕಟವಾದ ವರದಿ ಮತ್ತು ತಜ್ಞರ ಅಧ್ಯಯನದ ಪ್ರಕಾರ, ಜಗತ್ತಿನಾದ್ಯಂತ ಸುಮಾರು 12 ಸಾವಿರ ಪರಮಾಣು ಕ್ಷಿಪಣಿಗಳು ಬಳಕೆಯಾದಲ್ಲಿ, ಕೆಲವೇ ಗಂಟೆಗಳಲ್ಲಿ 500 ಕೋಟಿಗೂ ಅಧಿಕ ಜನ ಮೃತಪಡಲಿದ್ದಾರೆ.
ಪರಮಾಣು ಸ್ಫೋಟದ ನಂತರ ಉಂಟಾಗುವ ಹೊಗೆಯಿಂದ ಕೂಡಿದ ಬೂದಿ ಸೂರ್ಯನ ಕಿರಣಗಳನ್ನು ತಡೆಹಿಡಿಯಲಿದೆ. ಇಡೀ ಭೂಮಿ ನ್ಯೂಕ್ಲಿಯರ್ ವಿಂಟರ್ ಎಂಬ ಭಯಾನಕ ಸ್ಥಿತಿಗೆ ತಲುಪಲಿದೆ.ಮುಂದಿನ 10 ವರ್ಷಗಳ ಕಾಲ ಸೂರ್ಯನ ಬೆಳಕಿಲ್ಲದೆ ಭೂಮಿಯ ಮೇಲೆ ಸತತವಾಗಿ ಹಿಮ ಮಳೆ ಬೀಳಲಿದೆ.ಉಕ್ರೇನ್ ಮತ್ತು ಅಮೆರಿಕದ ಅಯೋವಾದಂತಹ ಕೃಷಿ ಪ್ರಧಾನ ಪ್ರದೇಶಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಲಿವೆ.ಕೃಷಿ ನಾಶವಾಗುವುದರಿಂದ ಜಗತ್ತಿನಾದ್ಯಂತ ಕೋಟ್ಯಂತರ ಜನರು ಹಸಿವಿನಿಂದ ಸಾವನ್ನಪ್ಪಲಿದ್ದಾರೆ.
ತಜ್ಞರ ಪ್ರಕಾರ, ಪರಮಾಣು ಯುದ್ಧದ ಭೀಕರತೆಯ ನಡುವೆಯೂ ಕೇವಲ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾತ್ರ ಬದುಕುಳಿಯುವ ಸಾಧ್ಯತೆಯಿದೆ. ಈ ಎರಡು ದೇಶಗಳು ಜಗತ್ತಿನ ಇತರ ಪ್ರಮುಖ ಭೂಭಾಗಗಳಿಂದ ದೂರವಿರುವುದು ಮತ್ತು ಸಮುದ್ರದ ಪ್ರಭಾವದಿಂದಾಗಿ ತಾಪಮಾನದಲ್ಲಿನ ತೀವ್ರ ಕುಸಿತ ಇಲ್ಲಿ ಅಲ್ಪ ಮಟ್ಟಿಗೆ ಕಡಿಮೆಯಿರಲಿದೆ.ಭೀಕರ ಚಳಿಯ ನಡುವೆಯೂ ಈ ದೇಶಗಳಲ್ಲಿ ಸ್ವಲ್ಪ ಮಟ್ಟದ ಕೃಷಿ ಮಾಡಲು ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಪರಮಾಣು ಸ್ಫೋಟದಿಂದ ಓಝೋನ್ ಪದರಕ್ಕೆ ಹಾನಿಯಾಗುವುದರಿಂದ ವಿಕಿರಣ ನೇರವಾಗಿ ಭೂಮಿಗೆ ತಗುಲಲಿದೆ.ಜನರು ಸೂರ್ಯನ ಬೆಳಕಿಲ್ಲದೆ ಕತ್ತಲೆಯಲ್ಲಿ ವಾಸಿಸಬೇಕಾಗುತ್ತದೆ.ವಿಕಿರಣದಿಂದ ರಕ್ಷಿಸಿಕೊಳ್ಳಲು ದೀರ್ಘಕಾಲದವರೆಗೆ ಭೂಗತ ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಇರುತ್ತದೆ. ಪರಮಾಣು ಯುದ್ಧದಿಂದ ಇಡೀ ಮಾನವ ಕುಲ ನಾಶವಾಗಬಹುದು. ಆದ್ದರಿಂದ ಮಾಡುವ ರಾಷ್ಟ್ರಗಳು ಎಚ್ಚೆತ್ತುಕೊಂಡು ಯುದ್ಧವನ್ನು ಕೊನೆಗೊಳಿಸಿದರೆ ಒಳಿತು.