ಕರ್ನಾಟಕ ಅಹಿಂದ ಜನ ಸಂಘದ ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಅಪ್ಪು ಅಮಸಿದ್ದ ಪೂಜಾರಿ ನೇಮಕ

ಬೆಂಗಳೂರು :- ಕರ್ನಾಟಕ ಅಹಿಂದ ಜನ ಸಂಘದ ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಅಪ್ಪು ಅಮಸಿದ್ದ ಪೂಜಾರಿ ರವರನ್ನು ನೇಮಕ ಮಾಡಲಾಗಿದೆ.ಅಹಿಂದ ಜನ ಸಂಘದ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರು ಅಯ್ಯಪ್ಪಗೌಡ ಅವರು ಅಪ್ಪು ಅಮಸಿದ್ದ ಅವರನ್ನು ನೇಮಕ ಮಾಡಿ. ಅಹಿಂದ ಸಮುದಾಯದ ಜನರು ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಶ್ರೇಯೋ ಭಿವೃದ್ಧಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.ತಮ್ಮ ನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಪ್ಪು ಅಮರಸಿದ್ದ ಪೂಜಾರಿ ಅವರು ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *