ವಡಗೇರ ತಾಲೂಕು ಡಾಟಾ ಎಂಟ್ರಿ ಆಪರೇಟರ್ ಗಳ ಪದಾಧಿಕಾರಿಗಳ ಆಯ್ಕೆ

ವಡಗೇರಾ : ತಾಲೂಕು ಪಂಚಾಯಿತಿಯಲ್ಲಿ ವಡಗೇರ ತಾಲೂಕು ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಗಳ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ರಂಗಪ್ಪ ಬಾಗ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಎಲ್ಲಾ ತಾಲೂಕು ಗ್ರಾಮ ಪಂಚಾಯಿತಿ ಆಪರೇಟರ್ ಗಳ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ನಾಗರಾಜ ಗುರಿಕಾರ ಹಯ್ಯಳ‌ ಬಿ, ಅಧ್ಯಕ್ಷರಾಗಿ ಸಂಗಾರೆಡ್ಡಿ ಸಾವೂರು ಬಿಳ್ಹಾರ, ಉಪಾಧ್ಯಕ್ಷರಾಗಿ ರಾಚಣ್ಣ ಮಳ್ಳಿ ಗುಲಸರಂ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಪಾಟೀಲ್ ಕೊಂಕಲ್, ಸಂಘಟನಾ ಕಾರ್ಯದರ್ಶಿಯಾಗಿ ಹನುಮಂತ್ರಾಯ ಕೊಂಕಲ್ ಟಿ. ವಡಿಗೇರ, ಸಹ ಕಾರ್ಯದರ್ಶಿಯಾಗಿ ಬಸವರಾಜ ಹಾಲಗೇರಾ, ಖಜಾಂಚಿಯಾಗಿ ಪ್ರವೀಣ್ ಕುಮಾರ್ ಉಳ್ಳೆಸೂಗೂರು, ಕಾರ್ಯಕಾರಿ ಸದಸ್ಯರಾಗಿ ಶ್ರೀನಿವಾಸ್ ಕುಲಕರ್ಣಿ ಐಕೂರು, ಮಹಮ್ಮದ್ ಅಲಿ ಗುಂಡಗುರ್ತಿ, ಸಿದ್ದು ಸಜ್ಜನ್ ರವರನ್ನು ಆಯ್ಕೆ ಮಾಡಲಾಯಿತು.

About The Author