ಜ್ಞಾನಗಂಗೋತ್ರಿ ಶಾಲೆಯಲ್ಲಿ ಕನಕದಾಸ ಜಯಂತಿ

ಶಹಪುರ : ಶಹಪುರದ ಹಳೆಪೇಟೆಯ ಜ್ಞಾನಗಂಗೋತ್ರಿ ಪ್ರಾಥಮಿಕ ಶಾಲೆಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದ ನಿಮಿತ್ಯ ಶ್ರೀ ಕನಕದಾಸರ ಭಾವಚಿತ್ರದ ಮೆರವಣಿಗೆ ಓಣಿಯ ಮುಖ್ಯ ರಸ್ತೆಗಳಲ್ಲಿ ನಡೆಯಿತು ದಾರಿ ಉದ್ದಕ್ಕೂ ಶ್ರೀ ಕನಕದಾಸರ ಭಾವಚಿತ್ರಕ್ಕೆ ಮತ್ತು ಶ್ರೀ ಕನಕದಾಸರ ವೇಷ ಭೂಷಣ ಧರಿಸಿದ ವಿದ್ಯಾರ್ಥಿಗಳಿಗೆ ಗೌರವಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಲೆಕ್ಕ ಪರಿಶೋಧನಾಧಿಕಾರಿ ನರಸಿಂಹಾಚಾರ್ಯ ಸಗರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳ ಡೊಳ್ಳು ಕುಣಿತ ಕನಕದಾಸರ ಕೀರ್ತನೆಗಳು ಗಮನ ಸೆಳೆದವು ಶಾಲೆಯ ಮುಖ್ಯಸ್ಥರು ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *