ಜಿಲ್ಲಾ ಪಂಚಾಯತ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ನ ಮರಿಯಣ್ಣ ನಾಯಕ್ ಮಲದಕಲ್ ಮಹಾಶೈವ ಧರ್ಮಪೀಠಕ್ಕೆ ಆಶೀರ್ವಾದ ನಿರೀಕ್ಷೆಯ ಭೇಟಿ.

RAICHUR ದೇವದುರ್ಗ ( ಗಬ್ಬೂರ  ಅಕ್ಟೋಬರ್ 06,2023 ) :ರಾಜಕಾರಣಿಗಳಿಗೆ ನಿಶ್ಚಿತ ರಾಜಕೀಯ ಭವಿಷ್ಯವನ್ನು ಕರುಣಿಸುವ ವಿಜಯದುರ್ಗೆ ಎಂದು ಬಿರುದುಗೊಂಡಿರುವ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಗಿಂದು ರಾಮದುರ್ಗ ಜಿಲ್ಲಾಪಂಚಾಯತ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮರಿಯಣ್ಣ ನಾಯಕ್ ಅವರು ಭೇಟಿ ನೀಡಿ,ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ಆಶೀರ್ವಾದ ಪಡೆದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ವಿಶ್ವೇಶ್ವರನ ಸನ್ನಿಧಿಯಲ್ಲಿ ಭಕ್ತಿ,ಗೌರವಗಳಿಂದ ಸನ್ಮಾನಿಸಿ ವಿಜಯಾನುಗ್ರಹ ಕರುಣಿಸಲು ಪ್ರಾರ್ಥಿಸಿದರು.

ರಾಮದುರ್ಗವು ಹೊಸ ಜಿಲ್ಲಾ ಪಂಚಾಯತಿ ಕ್ಷೇತ್ರವಾಗಿದ್ದು ಆ ಕ್ಷೇತ್ರದ ಜಾತ್ಯಾತೀತ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮರಿಯಣ್ಣ ನಾಯಕ್ ಅವರು ಉತ್ಸುಕರಾಗಿದ್ದಾರೆ.ಮಹಾಶೈವ ಧರ್ಮಪೀಠದ ನಿಷ್ಠಾವಂತ ಅನುಯಾಯಿಗಳಾಗಿರುವ ಆಂಜನೇಯ ನಾಯಕ್ ಮಲದಕಲ್ ಅವರು ದೇವದುರ್ಗದ ಶಾಸಕರಾಗಿರುವ ಶ್ರೀಮತಿ‌ ಕರಿಯಮ್ಮ ನಾಯಕ ಅವರ ಜೊತೆ ಎರಡು ಮೂರು ಬಾರಿ ಮಹಾಶೈವ ಧರ್ಮಪೀಠಕ್ಕೆ ಬಂದಾಗ ಪೀಠಾಧ್ಯಕ್ಷರು ನುಡಿದಿದ್ದ ನಿಶ್ಚಿತ ವಿಜಯದ ಅಭಯವಾಣಿಯು ನಿಜವಾದುದನ್ನು ಕಂಡು ಮರಿಯಣ್ಣ ನಾಯಕ್ ಅವರನ್ನು ಶ್ರೀಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದರು.ಮರಿಯಣ್ಣ ನಾಯಕರೊಂದಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ‘ಕ್ಷೇತ್ರದ ಮೀಸಲು ನಿಗದಿಯೊಂದಿಗೆ ಟಿಕೆಟ್ ಪಡೆದುಕೊಂಡು ಬನ್ನಿ,ಗೆಲ್ಲಿಸೋಣ ‘ಎಂದು ಕೆಲವು ಸಲಹೆಗಳನ್ನು ನೀಡಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಗೋಪಾಲ ಮಸೀದಪುರ,ಸಣ್ಣ ಹುಲಿಗೆಪ್ಪ ಮಡಿವಾಳ,ಆಂಜನೇಯ ನಾಯಕ್,ಹುಡೇದಯ್ಯ ಬೋವಿ,ಅಂಬಣ್ಣ ಕರ್ಲಿ,ಬಸವರಾಜ ಮಟ್ಲಾ,ರವಿಕುಮಾರ ಎಚ್ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *