ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಲಿ

ಶಹಾಪುರ : ಕಾಂಗ್ರೆಸ್ ಹೈಕಮಾಂಡ್ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವಂತೆ ಹೈದ್ರಾಬಾದ್ ಕರ್ನಾಟಕದ ಸಿದ್ದರಾಮಯ್ಯ ಬ್ರಿಗೇಡ್ ಉಪಾಧ್ಯಕ್ಷರಾದ ಭಾಗಪ್ಪ ತಡಿಬಿಡಿ ಆಗ್ರಹಿಸಿದ್ದಾರೆ. ಜಾತಿ ಅಂತ ಸಿದ್ದರಾಮಯ್ಯನವರು ಸಿಎಂ ಆಗುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದೀವಿ ಇದನ್ನು ಕಾಂಗ್ರೆಸ್ ಹೈಕಮಾಂಡ್ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ಐದು ದಶಕಗಳ ಕಾಲದಿಂದಲೂ ಅಧಿಕಾರದಲ್ಲಿ ಇರಲಿ ಅಥವಾ ವಿರೋಧ ಪಕ್ಷದಲ್ಲಿ ಇರಲಿ. ನಿರಂತರವಾಗಿ ಅಲ್ಪಸಂಖ್ಯಾತರ, ಹಿಂದುಳಿದವರ ಹಾಗೂ ದಲಿತರ ದನಿಯಾಗಿದ್ದಾರೆ. ತಾನು ನಂಬಿದ ತತ್ವಗಳಲ್ಲಿ ರಾಜಿ ಮಾಡಿಕೊಳ್ಳದೇ ನಡೆದಿದ್ದರಿಂದಲೇ ದೇಶದ ರಾಜಕಾರಣಿಗಳಲ್ಲಿ “ಸತ್ವಶಾಲಿ”ಯಾಗಿದ್ದಾರೆ.
ಯಾವುದೇ ಮಠಗಳಿಂದ ಮೇಲೆದ್ದವರಲ್ಲ.
ಜನರ ಅಭಿಮತಗಳಿಂದ ಮೇಲೆದ್ದವರು.
ಅಹಿಂದದ ನಾಯಕರಾದ ಸಿದ್ದರಾಮಯ್ಯನವರನ್ನು ಸಿಎಂ ಮಾಡಬೇಕೆಂದು ಮನವಿ ಮಾಡಿದರು.

About The Author