ನಗರದಲ್ಲಿ ಶ್ರೀಮತಿ ಭಾರತಿ ದರ್ಶನಾಪುರ ಪ್ರಚಾರ

ಶಹಾಪುರ : ನಗರದ ವಾರ್ಡ್ಗಳಲ್ಲಿ ಶ್ರೀಮತಿ ಭಾರತಿ ದರ್ಶನಾಪುರ ಪ್ರಚಾರ ಕೈಗೊಂಡು, ಶಹಾಪುರ ಶಾಸಕರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದನ್ನಾಧರಿಸಿಕೊಂಡು ಮತ್ತೊಮ್ಮೆ ಶಾಸಕರನ್ನಾಗಿ ಮಾಡಿ ಎಂದು ಶ್ರೀಮತಿ ಭಾರತಿ ದರ್ಶನಾಪುರ ನಗರದ ವಾರ್ಡಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕೈಗೊಂಡರು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಸಕರು ಶಾಶ್ವತ ಕುಡಿಯುವ ನೀರು ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಶಹಪುರ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ  ಶಾಸಕರನ್ನಾಗಿ ಮಾಡುವಂತೆ ಮತದಾರರಿಗೆ ವಿನಂತಿ ಮಾಡಿಕೊಂಡರು.

Leave a Reply

Your email address will not be published. Required fields are marked *