ಸಗರ ಗ್ರಾಮದಲ್ಲಿ ವಿವಿಧ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ

ಶಹಪುರ : ತಾಲೂಕಿನ ಸಗರ ಗ್ರಾಮದ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ಶಾಸಕ ಗುರು ಪಾಟೀಲ ಶಿರವಾಳ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿಕೊಂಡರು.

ಮಾನವೀಯತೆ ಹಾಗೂ ಸ್ವಾಭಿಮಾನದಿಂದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಜೆಡಿಎಸ್ ಪಕ್ಷ ಬೆಂಬಲಿಸುತ್ತಿರುವುದು ನಿಜಕ್ಕೂ ನನಗೆ ವೈಯಕ್ತಿಕವಾಗಿ ಸಂತೋಷ ತಂದಿದೆ ಎಂದು ಗುರು ಪಾಟೀಲ ಶಿರವಾಳ ತಿಳಿಸಿದರು .

ರೈತ ಮುಖಂಡರಾದ ಮಹೇಶಗೌಡ ಸುಬೇದಾರ ಮಾತನಾಡಿ ರೈತರು ಹಾಗೂ ರೈತಪರ ಸಂಘಟನೆ ಮುಖಂಡರುಗಳು ಪದಾಧಿಕಾರಿಗಳು ಯಾವಾಗಲೂ ಜೆಡಿಎಸ್ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಒಕ್ಕೂರಿನಿಂದ ಹೇಳಿದರು,
ಕಲ್ಲಪ್ಪ ಬಳಗಾರ,ಚಂದ್ರು ಹಾಗೂ ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *