ಒಂದು ಅವಕಾಶ ಕೊಡಿ ನಿಮ್ಮ ಸೇವೆ ಮಾಡಲು ಸದಾ ಸಿದ್ಧ : ಅಮೀನ್ ರೆಡ್ಡಿ ಯಾಳಗಿ

ಶಹಾಪುರ : ತಾಲೂಕಿನ ಶಹಾಪುರ ಮತಕ್ಷೇತ್ರದ ಗೊಡ್ರಿಹಾಳ ಗ್ರಾಮಕ್ಕೆ ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ  ಅಮೀನರಡ್ಡಿ ಯಾಳಗಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿ,ಒಂದು ಅವಕಾಶ ಕೊಡಿ ನಿಮ್ಮ ಸೇವೆ ಮಾಡಲು ಸದಾ ಸಿದ್ಧ.ಶಹಾಪುರ ಮತಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಪಕ್ಷದ ಹಿರಿಯ ಮುಂಖಂಡರಾದ ಡಾ. ಚಂದ್ರಶೇಖರ ಸುಬೇದಾರ ಅವರ ಜೊತೆ ಚುನಾವಣಾ ಪ್ರಚಾರ ನಡೆಸಿ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ‌ ಅಧ್ಯಕ್ಷರಾದ ರಾಜುಗೌಡ ಪಾಟೀಲ ಉಕ್ಕಿನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಗುರು ಕಾಮಾ,  ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಕಂದಕೂರ  ಸಿದ್ರಾಮಪ್ಪ,ಭೀಮರಾಯ ಭಂಡಾರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *