ಬ್ರಿಲಿಯಂಟ್ ಶಾಲಾ ಮಕ್ಕಳು ಉನ್ನತ ದರ್ಜೆಯಲ್ಲಿ ಉತ್ತೀರ್ಣ

ಗಬ್ಬೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೆಸರಾಂತ ಬ್ರಿಲಿಯಂಟ್ ಶಾಲಾ ಮಕ್ಕಳಾದ ಶ್ರೀಕಾಂತ ಕರಿಗಾರ ಮತ್ತು ಪ್ರಶಾಂತ ಕರಿಗಾರ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಶ್ರೀಕಾಂತ ಕರಿಗಾರ ನಾಲ್ಕನೇ ತರಗತಿಯಲ್ಲಿ 300 ಕ್ಕೆ 296 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ಪ್ರಶಾಂತ ಕರಿಗಾರ  ಎರಡನೇ ತರಗತಿಯಲ್ಲಿ 300ಕ್ಕೆ 297 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.

ಪೋಷಕರಾದ ಮಂಜುನಾಥ ಕರಿಗಾರ ಹರ್ಷ ವ್ಯಕ್ತಪಡಿಸಿದ್ದು, ಗ್ರಾಮದ ಬ್ರಿಲಿಯಂಟ್ ಶಾಲೆಯ ಮುಖ್ಯಗುರುಗಳಾದ ಲಿಂಗನಗೌಡ ಮತ್ತು ಸಹ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *