ಹಯ್ಯಳ ಬಿ ಗ್ರಾಮದಲ್ಲಿ ಹೊಸ ವರ್ಷದ ಬಣ್ಣದಾಟದ ಸಡಗರ

ವಡಗೇರಾ:ತಾಲ್ಲೂಕಿನ ಹಯ್ಯಾಳ ಬಿ  ಗ್ರಾಮದಲ್ಲಿ ಯುಗಾದಿ ಹಬ್ಬದ ನಿಮಿತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೌನೇಶ ಪೂಜಾರಿ ಬಣ್ಣದಾಟದಲ್ಲಿ ಪಾಲ್ಗೊಂಡು ಬಣ್ಣದಾಟ ದಲ್ಲಿ ಸಡಗರ-ಸಂಭ್ರಮದಿಂದ ಯುಗಾದಿ ಹಬ್ಬವು ಹಿಂದೂಗಳಿಗೆ ಪವಿತ್ರ ಹಬ್ಬವಾಗಿದ್ದು ಇದುವೇ ನಮಗೆ ನಿಜವಾದ ಹೊಸವರ್ಷ ಆದ್ದರಿಂದ  ಗ್ರಾಮೀಣ ಭಾಗದಲ್ಲಿ ರೈತ ಬಾಂಧವರು ಯುವಕರೆಲ್ಲ ಸೇರಿಕೊಂಡು ಪ್ರತಿ ವರ್ಷವೂ ಕೂಡ ಸೌಹಾರ್ದಯುತವಾಗಿ ಬಣ್ಣದಾಟವಾಡಿ ಯುಗಾದಿ ಹಬ್ಬವನ್ನು  ವಿಜ್ರಂಬಣೆಯಿಂದ ಆಚರಿಸುತ್ತೇವೆ ಎಂದು ಹೇಳಿದರು .ಬಣ್ಣದಾಟವಾಡಿ ಸರಳತೆ ಮೆರೆದಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು . ಈ ಸಂದರ್ಭದಲ್ಲಿ ಮುಕೇಶ್. ಕಾಮಣ್ಣ .ಶಂಭು ಪದ್ಮಣ್ಣ ನೂರ .ದೇವಿಂದ್ರ .ಭೀಮು ಸೂಗೂರು . ಶಂಭು  ಗಿರಿ ಕೇರ್ .ಹಾಗೂ ಗ್ರಾಮದ ಯುವಕರು ಮತ್ತು ರೈತ ಬಾಂಧವರು ಉಪಸ್ಥಿತರಿದ್ದರು .

About The Author