ಮಿಲಾದ್ ಸೋಶಿಯಲ್ ವೆಲ್ ಫೇರ್ ಸೊಸೈಟಿ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ

ಶಹಾಪುರ: ಇದೆ ಅ.02.ಭಾನುವಾರದಂದು ಮಿಲಾದ್ ಸೋಶಿಯಲ್ ವೆಲ್ ಫೇರ್ ಸೊಸೈಟಿ ಶಹಾಪುರದ ದಶಮಾನೋತ್ಸವ ಹಾಗೂ ಈದ್ ಇ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷರಾದ ಡಾ॥ ಅಬ್ದುಲ್ ಸಮದ್ ಶಹಾಪುರ ಕೋರಿರುತ್ತಾರೆ.

ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಹೃದಯರೋಗ, ನರರೋಗ, ಕ್ಯಾನ್ಸರ್, ಎಲುಬುರೋಗ,ಸ್ತ್ರೀ ರೋಗ,ಸಾಮಾನ್ಯ ರೋಗಗಳ ಉಚಿತ ಆರೋಗ್ಯ ತಪಾಸಣೆ ಹಾಗೂ ತಜ್ಞ ವೈದ್ಯರು ಸಲಹೆ ನೀಡಲಿದ್ದಾರೆ. ಅವಶ್ಯಕತೆ ಇರುವ ರೋಗಗಳಿಗೆ ಉಚಿತವಾಗಿ ಇ.ಸಿ.ಜಿ ಮತ್ತು 2-ಡಿ ಏಕೋ ಮಾಡಲಾಗುತ್ತದೆ ಹಾಗೂ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಅಂತ್ಯೋದಯ ಅಥವಾ ಬಿ.ಪಿ.ಎಲ್ ಕಾರ್ಡ್ದಾರರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.ಯ ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಆರೋಗ್ಯ ಶಿಬಿರವು ಹಳೆ ಬಸ್ ನಿಲ್ದಾಣ ಶಹಾಪುರ ಎದುರುಗಡೆ ಇರುವ ಸಿ ಪಿ ಎಸ್ ಮೈಧಾನದ ಉರ್ದು ಶಾಲೆಯಲ್ಲಿ ನಡೆಯಲಿದ್ದು,ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ತಪಾಸಣೆ ಮಾಡಲಾಗುವುದು ಎಂದು ಹೇಳಿದರು.

About The Author