ಪಿಯುಸಿ ಫಲಿತಾಂಶ:ಡಿಡಿಯು ಕಾಲೇಜಿನ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ

ಶಹಾಪುರ: ಶಹಾಪುರ ತಾಲೂಕಿನ ಡಿಡಿಯು ಕಾಲೇಜಿನ ವಿದ್ಯಾರ್ಥಿಗಳು ಪಿಯು ಫಲಿತಾಂಶದಲ್ಲಿ ಅಪ್ರತಿಮ ಸಾಧನೆ ಮಾಡಿದ್ದು, ಹಾಜರಾದ 197 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,112 ವಿದ್ಯಾರ್ಥಿಗಳು ಪ್ರಥಮ,30 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಐಶ್ವರ್ಯ/ಸಿದ್ರಾಮಪ್ಪ 600 ಅಂಕಗಳಲ್ಲಿ 585 ಅಂಕಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಭೌತಶಾಸ್ತ್ರದಲ್ಲಿ ನಾಲ್ಕು ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ ಇಬ್ಬರು, ಗಣಿತದಲ್ಲಿ ಹದಿನೈದು, ಜೀವಶಾಸ್ತ್ರದಲ್ಲಿ ಒಬ್ಬ ವಿದ್ಯಾರ್ಥಿ 100 ಕ್ಕೆ 100 ಅಂಕ ಪಡೆದಿದ್ದಾರೆ.ಶಹಾಪುದಲ್ಲಿಯೆ ಡಿಡಿಯು ಕಾಲೇಜು ಉತ್ತಮ ಸಾಧನೆ ಮಾಡಿದೆ.ಉತ್ತಮ ಸಾಧನೆಗೈದ ಮಕ್ಕಳಿಗೆ ಕಾಲೇಜು ಸಂಸ್ಥಾಪಕರಾದ ಡಾ.ಭೀಮಣ್ಣ ಮೇಟಿಯವರು ಅಭಿನಂದಿಸಿದ್ದು, ಕಾರ್ಯದರ್ಶಿಗಳಾದ ದೇವಿಂದ್ರಪ್ಪ ಮೇಟಿ,ಪ್ರಾಂಶುಪಾಲರಾದ ಸುರೇಶ ಪತ್ತಾರ ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *