ತೆರಿಗೆ ಹಣ ಜನರ ಕಲ್ಯಾಣಕ್ಕೆ ಬಳಕೆಯಾಗಲಿ: ಅಬ್ದುಲ್ ಅಲ್‌-ಸಯೀದ್

ಅಮೆರಿಕ (ಮಿಷಿಗನ್): ತೆರಿಗೆದಾರರು ಪಾವತಿಸುವ ಹಣವನ್ನು ಇತರ ದೇಶಗಳ ಜನರ ಮೇಲೆ, ಅವರ ಮಕ್ಕಳ ಮೇಲೆ ಬಾಂಬ್ ದಾಳಿ ನಡೆಸಲು ಬಳಸುವ ಬದಲು, ತೆರಿಗೆ ಪಾವತಿಸುವ ಜನರ ಮತ್ತು ಅವರ ಮಕ್ಕಳ ಕಲ್ಯಾಣಕ್ಕೆ ಬಳಸಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಅಬ್ದುಲ್ ಅಲ್‌-ಸಯೀದ್ ಹೇಳಿದ್ದಾರೆ.

ಮಿಷಿಗನ್‌ನಲ್ಲಿ ನಡೆದ ತೀವ್ರ ಪೈಪೋಟಿಯ ಅಮೆರಿಕ ಸೆನೆಟ್ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ ಬಳಿಕ ವಿಜಯೋತ್ಸವ ಭಾಷಣದಲ್ಲಿ ಅವರು ಮಾತನಾಡಿದರು.

ದಿನಸಿ ಸಾಮಗ್ರಿ ಖರೀದಿ, ವಾಹನಕ್ಕೆ ಇಂಧನ ತುಂಬಿಸುವುದು, ಸ್ವಂತ ಮನೆ ಹೊಂದುವುದು ಹಾಗೂ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಜನರಿಗೆ ಕಷ್ಟಕರವಾಗಬಾರದು. ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ದೇಶದಲ್ಲಿ ವೈದ್ಯರನ್ನು ಭೇಟಿ ಮಾಡಲು ಜನರು ಪರದಾಡುವ ಪರಿಸ್ಥಿತಿ ಇರಬಾರದು ಎಂದು ಹೇಳಿದರು.

ಅಮೆರಿಕದ ಶ್ರೇಷ್ಠತೆ ನ್ಯೂನತೆಗಳನ್ನು ಕಡೆಗಣಿಸುವುದರಲ್ಲಿ ಇಲ್ಲ. ಅವುಗಳನ್ನು ಸರಿಪಡಿಸಿಕೊಳ್ಳುವ ಧೈರ್ಯ ತೋರುವುದರಲ್ಲಿ ಅಡಗಿದೆ. ಜನರು ಪಾವತಿಸುವ ತೆರಿಗೆ ಹಣ ಅವರ ಜೀವನ ಸುಧಾರಣೆ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಬಳಕೆಯಾಗಬೇಕು ಎಂದು ಅಲ್‌-ಸಯೀದ್ ಅಭಿಪ್ರಾಯಪಟ್ಟರು.

..ವರದಿ : ಅಲ್‌ ಜಜೀರಾವರ

Leave a Reply

Your email address will not be published. Required fields are marked *