ಕನ್ನಡಾಂಬೆಗೆ ಪೂಜೆ ಸಲ್ಲಿಸಿ ರಾಜ್ಯೋತ್ಸವ ಆಚರಣೆ

ಶಹಾಪುರ: ಕರ್ನಾಟಕ ರಕ್ಷಣಾ ವೇದಿಕೆ ಶಹಾಪುರ ತಾಲೂಕು ಘಟಕದ ವತಿಯಿಂದ ತಾಲೂಕು ಅಧ್ಯಕ್ಷ ಅಂಬರೀಶ್ ಕಟ್ಟಿಮನಿ ಅವರ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ, ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಅಂಬರೀಶ್ ಕಟ್ಟಿಮನಿ, ಕನ್ನಡ ನಮ್ಮ ಸ್ವಾಭಿಮಾನ, ಕನ್ನಡ ನಮ್ಮ ಉಸಿರು. ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸದಾ ಹೋರಾಟ ನಡೆಸಲಿದೆ. ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಯನ್ನು ನಿತ್ಯ ಜೀವನದಲ್ಲಿ ಬಳಸುವ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂದು ಕರೆ ನೀಡಿದರು. ಆಂಜನೇಯ ಹಳಿಸಗರ, ಬಸ್ಸು ನಾಯ್ಕೋಡಿ, ಕರವೇ ಯುವ ಘಟಕದ ಶಹಾಪುರ ತಾಲೂಕು ಅಧ್ಯಕ್ಷ ಶಿವು ಸಿಂಹ ಭೀ.ಗುಡಿ, ಮಹಾದೇವ ದಿಗ್ಗಿ, ಹೊನ್ನಪ್ಪ ನಾಟೇಕಾರ, ಪವನಕುಮಾರ ರಾಕಿ ಹಳಿಪೇಟ, ಬಸವರಾಜ ನಾಟೇಕಾರ ಸೇರಿದಂತೆ ಕರವೇ ಪದಾಧಿಕಾರಿಗಳು, ಹಿರಿಯರು ಇದ್ದರು..

Leave a Reply

Your email address will not be published. Required fields are marked *