ಶಹಾಪುರ: ಕನ್ನಡ ನಾಡು, ನುಡಿ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಗೌರವಿಸುವ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ನಿತ್ಯೋತ್ಸವವಾಗಿ ಮೊಳಗಬೇಕು ಎಂದು ಯೋಗ ಶಿಕ್ಷಕ ಅಮರೇಶ್ ದಿಗ್ಗಿ ಹೇಳಿದರು.

ತಾಲೂಕಿನ ಸೈದಾಪುರ ಗ್ರಾಮದ ಯುನೈಟೆಡ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕದ ಇತಿಹಾಸ, ಏಕೀಕರಣದ ಹೋರಾಟ ಹಾಗೂ ಸಾಂಸ್ಕೃತಿಕ ಪರಂಪರೆಯ ಕುರಿತು ಮಕ್ಕಳಿಗೆ ವಿವರಿಸಿದರು.
ನವೆಂಬರ್ 1ರಂದು ವೈಭವದಿಂದ ಆಚರಿಸುವ ಕನ್ನಡ ರಾಜ್ಯೋತ್ಸವವು ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸುವ ಹೆಮ್ಮೆಯ ಹಬ್ಬವಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಲಿಂಗಮ್ಮ ಪೊಲೀಸ್ ಬಿರಾದಾರ್ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧಾರೂಢ ನಡುಕೂರ, ಮುಖ್ಯಗುರುಗಳಾದ ನಾಗಮ್ಮ, ಶಿಕ್ಷಕಿಯರಾದ ತ್ರಿಶಾ ಕೇರಳ, ಮುದ್ದಮ್ಮ ಮುದ್ದೇಬಿಹಾಳ, ವಿದ್ಯಾ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.