ಪಟೇಲ್ ರ ದೃಢ ನಿರ್ಧಾರದಿಂದ ವಿಮೋಚನೆಗೆ ಮುಕ್ತಿ : ಸಂಕೀನ್

ಜಿಲ್ಲಾ ಪತ್ರಿಕಾ ಭವನದಲ್ಲಿ ಕಲ್ಯಾಣ ಕನಾ೯ಟಕ ಉತ್ಸವ ದಿನಾಚರಣೆ 

ಪಟೇಲ್ ರ ದೃಢ ನಿರ್ಧಾರದಿಂದ ವಿಮೋಚನೆಗೆ ಮುಕ್ತಿ; ಸಂಕೀನ್

ಯಾದಗಿರಿ,,

ಜಿಲ್ಲಾ ಕಾಯ೯ನಿರತ ಪತ್ರಕ೯ರ ಸಂಘದ ವತಿಯಿಂದ ಕಲ್ಯಾಣ ಕನಾ೯ಟಕ ಉತ್ಸವ ದಿನಾಚರಣೆ ಜಿಲ್ಲಾ ಪತ್ರಿಕಾ ಭವನದಲ್ಲಿ ಆಚರಿಸಲಾಯಿತು.ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಬಳಿಕ ಮಾತನಾಡಿದ ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು. ಇಡೀ ದೇಶ ಸ್ವಾತಂತ್ಯವಾದರೂ ಕಲ್ಯಾಣ ಕನಾ೯ಟಕ ಭಾಗದ ಜಿಲ್ಲೆಗಳು ಮಾತ್ರ ಹೈದರಾಬಾದ್ ನಿಜಾಮನ ವಶದಲ್ಲಿದ್ದವು ಎಂದರು.

ಈ ಐತಿಹಾಸಿಕ ವಿಮೋಚನೆಯ ಹಿಂದೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಢ ನಿರ್ಧಾರ ಮತ್ತು ದೂರದೃಷ್ಟಿಯ ನಾಯಕತ್ವದ ಪರಿಣಾಮವಾಗಿ ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡು, ಈ ಪ್ರದೇಶದ ಜನರಿಗೆ ನಿಜವಾದ ಸ್ವಾತಂತ್ರ‍್ಯ ಲಭಿಸಿತು ಎಂದು ತಿಳಿಸಿದರು.

ಸಾಕಷ್ಟು ಹೋರಾಟಗಾರರ ತ್ಯಾಗವನ್ನು ನಾವು ಯಾವುದೇ ಕಾರಣಕ್ಕೂ ಮರೆಯಬಾರದು. ಅವರು ಹಾಕಿಕೊಟ್ಟಿರುವ ಮಾಗ೯ದಲ್ಲಿ ದೃಢವಾಗಿ ಸಾಗುವುದು ತುಂಬ ಅಗತ್ಯವಿದೆ ಎಂದು ತಿಳಿಸಿದರು.ಹಿಂದುಳಿದಿರುವ ಕಲ್ಯಾಣ ಕನಾ೯ಟಕ ಭಾಗದ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚಿನ ಆಧ್ಯತೆ ನೀಡಲು ಮುಂದಾಗುವ ಮೂಲಕ ಪ್ರಗತಿಗೆ ಮುನ್ನುಡಿ ಬರೆಯಬೇಕು ಎಂದರು.

ಹನುಮಂತ ಪಿ., ಮಹೇಶ್ ಗಣೇರ್, ದೇವರಾಜ ನಾಯಕ ವಕ೯ನಹಳ್ಳಿ, ಸುಧೀರ್ ಕೋಟೆ, ಬೀರಲಿಂಗಪ್ಪ ಕಿಲ್ಲನಕೇರಾ, ನಾಗರಾಜ ಬೀರನೂರು, ಆಂಜನೇಯ ದೇವರಮನೆ, ರಾಜೇಂದ್ರ ಕಲಾಲ್ ಇದ್ದರು.

Leave a Reply

Your email address will not be published. Required fields are marked *