
ಶಹಾಪುರ:
ಸಂಗೀತ, ಸಾಹಿತ್ಯ ಮತ್ತು ಕಲೆಗಳು ಬೇರುಮಟ್ಟದಲ್ಲಿ ಬೆಳೆಯಬೇಕಾದರೆ ಕಲಾವಿದರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ವಿಶ್ವಚೇತನ ಸಂಸ್ಥೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಹೇಳಿದರು.ನಗರದ ಫಕೀರೇಶ್ವರ ಮಠದ ಸಭಾಭವನದಲ್ಲಿ ವಿಶ್ವಚೇತನ ಜನ ಸೇವಾ ಸಂಸ್ಥೆ ಶಹಾಪುರ ವತಿಯಿಂದ 80ನೇ ಸ್ವಾತಂತ್ರ್ಯ ವರ್ಷಾಚರಣೆ ಅಂಗವಾಗಿ ಸಂಗೀತ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಕಟಪೂರ್ವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ದೇಶಭಕ್ತರು ಹಾಗೂ ಹುತಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಅವರ ತ್ಯಾಗದಿಂದಲೇ ಭವ್ಯ ಭಾರತ ನಿರ್ಮಾಣವಾಗಿದೆ ಎಂದರು.
ಫಕೀರೇಶ್ವರ ಮಠದ ಪೂಜ್ಯ ಶ್ರೀ ಗುರುಪಾದ ಸ್ವಾಮೀಜಿ ಹಾಗೂ ವಿಶ್ವಕರ್ಮ ಏಕದಂಡಿಗಿ ಮಠದ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ದೇವೇಂದ್ರಪ್ಪ ಎಸ್. ಕನ್ಯಾಕೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಿಂಗಣ್ಣ ಹಳ್ಳಿ ಅವರಿಗೆ ಶಿಲ್ಪ ಸೇವಾ ರತ್ನ,ಸುಧಾಕರ ಕುಲಕರ್ಣಿ ಶಿಕ್ಷಣ ಸೇವಾ ರತ್ನ, ಮಲ್ಲಣ್ಣ ಹೊಸಮನಿ ಶಿರವಾಳ ಸಾಹಿತ್ಯ ಸೇವಾ ರತ್ನ, ಮನೋಹರ ವಿಶ್ವಕರ್ಮ ಏವೂರ ಸಮಾಜ ಸೇವಾ ರತ್ನ’, ಸಂತೋಷ ಎಂ. ಆಚಾರ್ಯ ಶಾರದಹಳ್ಳಿ ಅವರಿಗೆ ‘ಪರಿಸರ ಸೇವಾ ರತ್ನ, ಕಲ್ಲಯ್ಯ ಸ್ವಾಮಿ ಹಿರೇಮಠ ಸಂಗೀತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೆಯೆಎಂ.ನಾರಾಯಣ, ಅಮೃತಹಳ್ಳಿ ಸಾಯಿಬಣ್ಣ ಪುರ್ಲೆ, ರಾಜಶೇಖರ ಪತ್ತಾರ ಬೊಮ್ಮನಹಳ್ಳಿ, ಬಸವರಾಜ ಕರೇಗಾರ, ಡಾ. ರವೀಂದ್ರನಾಥ ಹೊಸಮನಿ ಸೇರಿದಂತೆ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.ಸಂಗೀತ ಕಲಾವಿದರಾದ ಮಲ್ಲಯ್ಯ ಸ್ವಾಮಿ ಹಿರೇಮಠ ಮಲ್ಲಾಬಾದ, ರಮೇಶ ವಿಶ್ವಕರ್ಮ ಸಗರ, ಮನೋಹರ ಸಿ. ಆಚಾರ್ಯ ಸಗರ ಹಾಗೂ ಚಂದ್ರಶೇಖರ ಸಿ. ಗೋಗಿ ಸೇರಿದಂತೆ ಇತರರು ಇದ್ದರು.ಸಂತೋಷ ಪತ್ತಾರ ನಿರೂಪಿಸಿದರು. ಸುರೇಶ ಅರುಣಿ ಸ್ವಾಗತಿಸಿದರು. ಗುರಣ್ಣ ಮದುರಿ ವಂದಿಸಿದರು.