ಭೀರಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ಶೀಘ್ರ ಅನುದಾನ : ಶಾಸಕ ದರ್ಶನಾಪುರ

ಶಹಾಪುರ: ತಾಲೂಕಿನ ಕುರುಬ ಸಮಾಜದ ಮುಖಂಡರು ಭೀಮರಾಯನಗುಡಿ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವರು ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ಭೇಟಿಯಾಗಿ ಸಮಾಜದ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಿದರು. ಶಹಾಪುರ ನಗರದ ಭೀರಲಿಂಗೇಶ್ವರ ದೇವಸ್ಥಾನದ ಮೆಟ್ಟಿಲು, ಸಿ.ಸಿ. ರಸ್ತೆ ಹಾಗೂ ಕಂಪೌಂಡ್ ನಿರ್ಮಾಣ ಸೇರಿದಂತೆ ದೇವಸ್ಥಾನದ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಅನುಧಾನದ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಅದೇ ರೀತಿ ನಗರದಲ್ಲಿ ನಿರ್ಮಾಣಗೊಂಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಹಾಗೂ ಕನಕ ಭವನದ ಉದ್ಘಾಟನೆಯನ್ನು ಅತಿಶೀಘ್ರದಲ್ಲಿ ನೆರವೇರಿಸುವುದಾಗಿ ಶಾಸಕರು ತಿಳಿಸಿದರು.ಈ ಸಂದರ್ಭದಲ್ಲಿ ನಾನಾಗೌಡ ಮೇಟಿ, ರಾಯಪ್ಪ ಚೆಲುವಾದಿ, ಸಿದ್ದಪ್ಪ ಕನ್ಯೆಕೊಳೂರು, ರವಿ ರಾಜಾಪುರ, ಮಾಳಿಂಗರಾಯ ಗುತ್ತೇದಾರ, ದೇವು ಭೀಗುಡಿ, ಶಿವುಮಾಂತಪ್ಪ ಚಂದಾಪುರ, ಸೀನು ನಾಸಿ, ಬಸ್ಸು ನಾಟೇಕರ್,
ಮಲ್ಲಿಕಾರ್ಜುನ ದೋರನಹಳ್ಳಿ,ಶಾಂತು ಪಾಟೀಲ್ ಕಾಡಂಗೇರ, ಬಲಭೀಮ ಮಡ್ನಾಳ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಭೀರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಸಮಾಜದ ಪ್ರಮುಖ ಬೇಡಿಕೆಗಳನ್ನು ಶಾಸಕರ ಗಮನಕ್ಕೆ ತಂದಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಹಾಗೂ ಕನಕ ಭವನ ಉದ್ಘಾಟನೆ ಶೀಘ್ರ ನಡೆಯಲಿದೆ ಎಂಬ ಭರವಸೆ ಸಮಾಜದ ಬಂಧುಗಳಲ್ಲಿ ಸಂತಸ ಮೂಡಿಸಿದೆ.
ಯಲ್ಲಪ್ಪ ನರಿ 
ಅಧ್ಯಕ್ಷರು
ತಾಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘ ಶಹಾಪುರ.

 ಸಮಾಜದ ಅಭಿವೃದ್ಧಿ, ಅಗತ್ಯವಿರುವ ಕಾಮಗಾರಿಗಳಿಗೆ ಶಾಸಕರು ಸ್ಪಂದಿಸಿರುವುದು ಸ್ವಾಗತಾರ್ಹ. ಭೀರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು ಶೀಘ್ರ ಆರಂಭವಾಗುವ ವಿಶ್ವಾಸವಿದೆ. ಸಂಗೊಳ್ಳಿ ರಾಯಣ್ಣ ಹಾಗೂ ಕನಕ ಭವನದ ಉದ್ಘಾಟನೆ ಕೂಡ ಅದ್ದೂರಿಯಾಗಿ ನಡೆಯಲಿದೆ
ಶಾಂತಗೌಡ ನಾಗನಟಗಿ.
ನಿರ್ದೇಶಕರು
ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ಬೆಂಗಳೂರು.

Leave a Reply

Your email address will not be published. Required fields are marked *