ತಹಸೀಲ್ದಾರ್ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ

ಶಹಾಪುರ :  12ನೇ ಶತಮಾನದ ವಚನ ಚಳುವಳಿಯ  ಶರಣರು, ಬಸವಣ್ಣನವರ ಕಾಲಮಾನದ ಹಡಪದ ಅಪ್ಪಣ್ಣನವರ 892ನೇ ಜಯಂತಿಯನ್ನು ಬುಧವಾರ ಶಹಾಪುರ ತಹಸೀಲ್ದಾರ್ ಕಚೇರಿಯಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಶರಣತತ್ವ, ಸಮಾನತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಲಾಯಿತು. ಬಸವಣ್ಣನವರ ವಚನ ಚಳುವಳಿಗೆ ಹಡಪದ ಅಪ್ಪಣ್ಣನವರು ನೀಡಿದ ಕೊಡುಗೆ ಅವಿಸ್ಮರಣೀಯವಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು  ತಹಶೀಲ್ದಾರರಾದ ಸಿದ್ದಾರೂಢ ಬನ್ನಿಕೊಪ್ಪ  ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಚೇರಿಯ ಸಿಬ್ಬಂದಿ ಹಾಗೂ ಹಡಪದ ಸಮಾಜದ ತಾಲೂಕು ಅಧ್ಯಕ್ಷ ಶರಣಬಸಪ್ಪ ಬಿ. ಹಡಪದ ಸಗರ, ಭೀಮರಾಯ ಮದರಕಲ್, ಬಸವರಾಜ ಬಸವಂತಪುರ, ಶೇಕಣ್ಣ ಗೋಗಿ, ಜಂಬಣ್ಣ ಬಿಗುಡಿ, ಮಲ್ಕಣ್ಣ ಸಗರ, ಮಲ್ಲಿಕಾರ್ಜುನ ಸಗರ, ಶರಬಣ್ಣ ಮದರಕಲ್, ಹಂಪಣ್ಣ ಕೊಳ್ಳೂರ, ಎಂ. ಭೀಮರಾಯ ಶಿರವಾಳಕರ್, ಆನಂದ ಸಗರ, ಬಸವರಾಜ ಕೊಳ್ಳೂರ, ಶಿವಪ್ಪ ಗೋಗಿ, ಸಂತೋಷ ಗೋಗಿ, ಶರಣಬಸಪ್ಪ ಎಂ. ಹಡಪದ ಸಗರ, ಸಂಗಪ್ಪ ಇಟಗಿ, ಮಲ್ಲಿಕಾರ್ಜುನ ದೋರನಹಳ್ಳಿ ಸೇರಿದಂತೆ ದೋರನಹಳ್ಳಿ ಗ್ರಾಮ ಘಟಕದ ಸದಸ್ಯರು, ಹಡಪದ ಸಮಾಜದ ಹಿರಿಯ ಮುಖಂಡರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *