ಹೊಸಳ್ಳಿಗೆ ಮೊದಲ ಸರ್ಕಾರಿ ಬಸ್: ಗ್ರಾಮದಲ್ಲಿ ಸಂಭ್ರಮ

ಶಹಾಪುರ ; ತಾಲೂಕಿನ ಹೊಸಳ್ಳಿ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಸರ್ಕಾರಿ ಬಸ್ ಸೌಲಭ್ಯ ದೊರೆತಿದ್ದು, ಗ್ರಾಮಸ್ಥರಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ಬಸ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಮಾವಿನ ಎಲೆ ಹಾಗೂ ಹೂಗಳಿಂದ ಬಸ್‌ನ್ನು ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದಿಂದ ಸ್ವಾಗತಿಸಿದರು.

ಇಲ್ಲಿಯವರೆಗೆ ಬಸ್ ಸೌಲಭ್ಯವಿಲ್ಲದೆ ಗ್ರಾಮಸ್ಥರು ತಮ್ಮ ದೈನಂದಿನ ಅಗತ್ಯಗಳಿಗಾಗಿ ಸಮೀಪದ ಸಗರ ಗ್ರಾಮಕ್ಕೆ ಸುಮಾರು ನಾಲ್ಕು ಕಿಲೋಮೀಟರ್ ನಡೆದು ತೆರಳಬೇಕಾಗುತ್ತಿತ್ತು. ಇದೀಗ ಗ್ರಾಮದಿಂದಲೇ ಬಸ್ ಸಂಚಾರ ಆರಂಭಗೊಂಡಿರುವುದು ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಈ ಬಸ್ ಸೌಲಭ್ಯ ಕಲ್ಪಿಸಲು ಸಹಕರಿಸಿದ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಬಸ್ ಸಂಚಾರ ಆರಂಭಗೊಂಡಿರುವುದು ಗ್ರಾಮಸ್ಥರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಲಿಂಗನಗೌಡ ಮಾಲಿಪಾಟೀಲ, ಮಾಜಿ ಗ್ರಾಪಂ ಉಪಾಧ್ಯಕ್ಷ ಸೋಪಣ್ಣ ಮೈಲಾರಪ್ಪ ದೊರಿ, ಲಕ್ಷ್ಮಣ್ ಬಾಂದನಿ, ತಿಮ್ಮಯ್ಯ ಬಣಗಾರ, ಭಾಗಣ್ಣ ಕಕ್ಕೇರಿ, ಭೀಮಣ್ಣ ಕಕ್ಕೇರಿ, ಮಾನಪ್ಪ ಕಕ್ಕೇರಿ, ನಿಂಗಪ್ಪ ಪೂಜಾರಿ, ಯಂಕಪ್ಪ ಬಾಂದನಿ, ಹನುಮಂತ ಬಿರಾಳ, ಕೃಷ್ಣಪ್ಪ ಭಂಡಾರಿ, ಶಂಭುಲಿಂಗಪ್ಪ ಮ್ಯಾಗೇರಿ, ಭೀಮಣ್ಣ ಮಕಾಶಿ, ರಾಮು ದೊರೆ ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *