ಶಹಾಪುರ,,
ಪರಿಶಿಷ್ಟ ಜಾತಿಗಳೊಳಗಿನ ಒಳಮೀಸಲಾತಿ ಸಚಿವ ಸಂಪುಟದಲ್ಲಿ ಏ.24ರಂದು ಒಪ್ಪಿಗೆ ನೀಡಿರುವುದು ಸಂತಸ ತಂದಿದೆ ಎಂದು ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ ಅಧ್ಯಕ್ಷ ಪ್ರದೀಪ ಅಣಬಿ ಹರ್ಷ ವ್ಯಕ್ತಪಡಿಸಿದ್ದಾರೆ.ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿದ್ದ ಒಳಮೀಸಲಾತಿ ಹೋರಾಟಕ್ಕೆ ರಾಜ್ಯ ಸರ್ಕಾರ ನ್ಯಾಯ ಒದಗಿಸಿಕೊಟ್ಟಿದೆ. ನಾಗಮೋಹನದಾಸ ವರದಿಯನ್ನು ಪರಿಷ್ಕರಿಸಿ, ಗೊಂದಲಗಳನ್ನು ನಿವಾರಣೆ ಮಾಡಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.ಸಮಬಾಳು – ಸಮಪಾಲು ಎಂಬ ತತ್ವದಡಿ ಒಳಮೀಸಲಾತಿ ಜಾರಿಗೊಂಡಿದ್ದು, ಇದರಿಂದ ಶೋಷಿತ ಸಮುದಾಯಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ದೀರ್ಘಕಾಲದಿಂದ ಪರಿಶಿಷ್ಟ ಜಾತಿಗಳೊಳಗಿನ ಅಸಮಾನತೆ ನಿವಾರಣೆಗೆ ಈ ನಿರ್ಧಾರ ಸಹಕಾರಿಯಾಗಲಿದೆ ಎಂದು ತಿಳಿಸಿದರು.