ಹಳಿ ಸಗರದಲ್ಲಿ ಬಾಬಾ ಸಾಹೇಬರ ಜನ್ಮದಿನಾಚರಣೆ

ಶಹಾಪುರ –  

ನಗರದ ಹಳಿಸಾಗರ ವಾರ್ಡ್ ನಂ. 28ರಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಸಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಆದರ್ಶಗಳು ಹಾಗೂ ಸಮಾಜ ಸೇವೆಯ ಕುರಿತು ಸ್ಮರಿಸಲಾಯಿತು. ಅಂಬೇಡ್ಕರ್ ಅವರ ಸಂವಿಧಾನ ರಚನೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಮಾಡಿದ ಹೋರಾಟವನ್ನು ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀಮತಿ ಶೈಲಾ ಪ್ರದೀಪ, ಗಗನ ಅಣಬಿ, ಸೌಜನ್ಯ ಅಣಬಿ, ಅಯ್ಯಪ್ಪ ನಾಟೆಗೇರ, ನಿಖಿಲ್ ದೊಡ್ಡಮನಿ, ಐರ ಕಟ್ಟಿಮನಿ, ರಾಮು ನಾಗನೂರ, ಆಂಜನೇಯ ದೊಡ್ಡಮನಿ, ಸಂದೀಪ್ ದೊಡ್ಡಮನಿ, ಮಂಜುನಾಥ ಕಟ್ಟಿಮನಿ, ಸಾಬು ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *