ಶಹಪುರ | ಮಾರ್ಕ್ಸವಾದಿ ಕಚೇರಿಯಲ್ಲಿ ಬಾಬಾ ಸಾಹೇಬರ ಜನ್ಮದಿನಾಚರಣೆ

ಶಹಪುರ,

ಭಾರತ ಕಮ್ಯುನಿಸ್ಟ್   ಪಕ್ಷ ಮಾರ್ಕ್ಸವಾದಿ  ಶಹಪುರದ ಕಚೇರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆ ಮಾಡಲಾಯಿತು.  ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ತಾರತಮ್ಯ ಅಸ್ಪೃಶ್ಯತೆ ಇನ್ನು ಜೀವಂತವಾಗಿದ್ದು ಜನಜಾಗೃತಿ ಮೂಡಿಸುವ ಮೂಲಕ ಜನತೆಯಲ್ಲಿ ಐಕ್ಯತೆ ಮೂಡಿಸಲು ಸಿಪಿಐಎಂ ಪಕ್ಷ ಕರೆ ನೀಡಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಚೆನ್ನಪ್ಪ ಆನೆಗುಂದಿ ಮಾತನಾಡಿ ಆಶ್ರಯ ಮನೆ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗಾಗಿ ಹೋರಾಟ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ , ಎಸ್ಎಂ ಸಾಗರ, ಭೀಮರಾಯ ಪೂಜಾರಿ ಭೀಮಣ್ಣ ಟಪ್ಪೇದಾರ, ಹೊನ್ನಪ್ಪ ಮಾನ್ಪಡೆ, ಕಾಶಿನಾಥ, ರಂಗಮ್ಮ ಕಟ್ಟಿಮನ,ದೇವು ಹೋತಪೇಟೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *