
ಶಹಾಪುರ,,
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 16ನೇ ಬಜೆಟನ್ನು ಮಂಡಿಸಿದ್ದಾರೆ. ಸರ್ವ ಜನಾಂಗದ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಆರೋಗ್ಯ ಬಡವರ ಪರ ಬಜೆಟ್ ಮಂಡಿಸಿದ್ದಾರೆ ಎಂದು ಕೆಪಿಸಿಸಿ ಪದವೀಧರ ವಿಭಾಗದ ರಾಜ್ಯ ಕಾರ್ಯದರ್ಶಿ ಡಾ. ಕೃಷ್ಣಮೂರ್ತಿ ಪ್ರಶಂಸಿದ್ದಾರೆ.
ಪ್ರಸ್ತುತ ಬಜೆಟನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಒತ್ತುಕೊಡಲಾಗಿದ್ದು ಹೆಚ್ಚಿನ ಅನುದಾನವನ್ನು ಮೀಸಲಿಡಲಾಗಿದ್ದು, ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಐದು ಗ್ರಾರಂಟಿ ಯೋಜನೆಗಳಿಗೆ ಒತ್ತಕೊಟ್ಟ ಹಣಕಾಸು ಖಾತೆ ಹೊಂದಿದ ಮುಖ್ಯಮಂತ್ರಿಯವರು ಬಡವರಿಗೆ ನೇರವಾಗಿ ತಲುಪುವಂತಹ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗಾಗಿ ಅನುದಾನವನ್ನು ಬಜೆಟನಲ್ಲಿ ಕಲ್ಪಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತುಕೊಟ್ಟ ಮುಖ್ಯಮಂತ್ರಿಗಳು 800 ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಯುವಕರ ಬೇಡಿಕೆಗೆ ಸ್ಪಂದಿಸಿದ ಸಚಿವ ಮುಖ್ಯಮಂತ್ರಿಗಳು ವಿವಿಧ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗೆ ಭರವಸೆ ನೀಡಿದ್ದು 15,000 ಬೋಧಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ.
ರಾಜ್ಯಾದ್ಯಂತ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಕೌಶಲ್ಯಾಭಿವೃದ್ಧಿಗೆ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಉದ್ಯೋಗ ಮೇಳವನ್ನು ಏರ್ಪಡಿಸಿ ಹಲವಾರು ಯುವಕರಿಗೆ ಉದ್ಯೋಗ ಕಲ್ಪಿಸಿ ಕೊಡಲಾಗಿದೆ.ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆಯವರ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಅನುದಾನವನ್ನು ನೀಡಲಾಗಿದ್ದು ಹಲವು ಯೋಜನೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಘೋಷಣೆ ಮಾಡಲಾಗಿದೆ.
ಒಳಚರಂಡಿ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್ ನಲ್ಲಿ ಕಾಣಬಹುದಾಗಿದೆ.ಎಲ್ಲಾ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡ ಮುಖ್ಯಮಂತ್ರಿಗಳು ಸರ್ವ ಜನಾಂಗದ ಸಮಾಜಮುಖಿ ಬಜೆಟನ್ನು ಮಂಡಿಸಿದ್ದಾರೆ. ವಸತಿ ರಹಿತರಿಗೆ ವಸತಿ ಭಾಗ್ಯ, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅನುದಾನ ಮೀಸಲಿಡಲಾಗಿದೆ.ಹೊಸ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ. ಮುಖ್ಯಮಂತ್ರಿಗಳು 2025-26 ನೇ ಸಾಲಿನಲ್ಲಿ ಜಿಡಿಪಿಯು ರಾಜ್ಯದಲ್ಲಿ ಶೇ. 8.1ರಷ್ಟು ದಾಖಲಾಗಿದೆ.
ರೈತರಿಗೆ ವಿಶೇಷ ಆದ್ಯತೆ ನೀಡಿದ ಮುಖ್ಯಮಂತ್ರಿಗಳು 40 ಲಕ್ಷ ರೈತರಿಗೆ 468 ಕೋಟಿ ಸಹಾಯಧನ ನೀಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ಶಿಕ್ಷಣಕ್ಕೆ 47224 ಕೋಟಿ ಅತೀ ಹೆಚ್ಚು ಅನುದಾನ ನೀಡಲಾಗಿದ್ದು ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಸಚಿವ ಪ್ರೀಯಾಂಕ ಖರ್ಗೆ ಕಾಳಜಿ : ಕಲಬುರ್ಗಿಗೆ ದೊರೆತ ಸೌಲಭ್ಯಗಳು
* ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್‌ನಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ ಪ್ರಸ್ತುತ 275 ಕೋಟಿ.
* ಉದ್ಯಮಿಗಳಿಗೆ ಇನ್‌ಕ್ಯುಬೇಷನ್ ಸೌಲಭ್ಯಕ್ಕಾಗಿ ಪ್ಲಗ್ ಆ್ಯಂಡ್ ಪ್ಲೇ ಸೌಲಭ್ಯದ ಲೀಪ್ ಲ್ಯಾಬ್ಸ್ ಸ್ಥಾಪನೆ.
* ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಆರಂಭ.
* ಸಿಲ್ಕ್ ಪಾರ್ಕ್ ಸ್ಥಾಪನೆ. ಕುರಿ/ಮೇಕೆ ಘಟಕ ಸ್ಥಾಪನೆ.
* ನಿಂಬರಗಾದಲ್ಲಿ ವಸತಿ ಪ್ರಥಮ ದರ್ಜೆ ಕಾಲೇಜು.
* ಎಸ್‌ಸಿ-ಎಸ್‌ಟಿ ಉದ್ಯೋಗಸ್ಥ ಮಹಿಳೆಯರಿಗೆ ಸ್ಥಾಪನೆ.
* ಅಂಬೇಡ್ಕರ್ ಭೇಟಿ ನೀಡಿದ ಕಲಬುರಗಿಯಲ್ಲಿ ಅವರ ಹೆಸರಿನಲ್ಲಿ ಸಿಬಿಎಸ್‌ಇ ವಸತಿ ಶಾಲೆ ಆರಂಭ.
* ವಾಗ್ದಾರಿ ರಿಬ್ಬನ್ ಪಲ್ಲಿ 135 ಕಿ.ಮೀ. ರಸ್ತೆ ಅಭಿವೃದ್ಧಿ.
* ಕಲಬುರಗಿ ನಗರಕ್ಕೆ ಗುಣಮಟ್ಟದ ನೀರು ಒದಗಿಸಲು ₹1,863 ಕೋಟಿಯ ಡಿಪಿಆರ್ ಸಿದ್ಧಪಡಿಸಲಾಗುತ್ತದೆ.
* ಹಜ್ ಭವನ ನಿರ್ಮಾಣ.
* ₹16 ಕೋಟಿ ವೆಚ್ಚದಲ್ಲಿ ಪ್ರೈಡರ್ ಎಲೆಕ್ಟ್ರಿಕ್ ಯುತ್ ಇಂಪ್ಯಾಕ್ಟ್ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.
* ಜೇವರ್ಗಿಯಲ್ಲಿ ಕೆಕೆಆರ್‌ಡಿಬಿ ಅನುದಾನದಿಂದ ನಾಲೆಡ್ಜ್ ಪಾರ್ಕ್ ಸ್ಥಾಪಿಸಲಾಗುವುದು.
* ಅಫಜಲ್‌ಪುರ – ಚಿತ್ತಾಪುರ್, ಜೇವರ್ಗಿ- ಮೈಕ್ರೋ ಅನುದಾನದಲ್ಲಿ ಒಳಚರಂಡಿ.
*********************************
ಕಲಬುರ್ಗಿ ಜಿಲ್ಲೆಯ ಅಭಿವೃದ್ಧಿಗಾಗಿ ಅನುದಾನ ಕಲ್ಪಿಸಿ ಕೊಟ್ಟು ಹಲವು ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಗಾಗಿ ಶ್ರಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ,ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಾ.ಕೃಷ್ಣಮೂರ್ತಿಯವರು ಹೇಳಿದರು.
Post Views: 20