ಪಶು ಆಸ್ಪತ್ರೆಯಲ್ಲಿ ಕಾಲುಬಾಯಿ ರೋಗಕ್ಕೆ ಲಸಿಕೆ 

ವಡಗೇರಾ :  ಪಶು ಆಸ್ಪತ್ರೆಯಲ್ಲಿ ಪಶುಗಳಿಗೆ ಕಾಲುಬಾಯಿ ರೋಗಕ್ಕೆ  ಮುಖಂಡರಾದ ಹನುಮಂತರಾಯಗೌಡ ಪಶುಗಳಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು. ಮೊದಲಿಗೆ ಗೋ ಪೂಜೆ ಸಲ್ಲಿಸುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.ಅಸ್ಪತ್ರೇಯ ಸಹಾಯಕ ನಿರ್ದೇಶಕರಾದ ಷಣ್ಮುಖಪ್ಪ ಗೊಂಗಡಿ ಮಾತನಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಜಾನುವಾರುಗಳಿಗೆ ಶೇ. ನೂರರಷ್ಟು ಲಸಿಕೆ ಹಾಕಲಾಗುವುದು. ತಾಲೂಕಿನಲ್ಲಿ 40,165 ದನಗಳು, 8315 ಎಮ್ಮೆಗಳು ಸೇರಿದಂತೆ 48480 ಜಾನುವಾರುಗಳಿಗೆ ಎಂದು ತಿಳಿಸಿದರು.
ಪಶು ಇಲಾಖೆ ವತಿಯಿಂದ 25 ಜನ ಸಿಬ್ಬಂದಿಗಳನ್ನು ಲಸಿಕಾಕರಣ ಕಾರ್ಯಕ್ರಮಕ್ಕೆ ನೇಮಿಸಲಾಗಿದ್ದು, ಜೊತೆಗೆ ಏಳು ಜನ ಮೈತ್ರಿ ಕಾರ್ಯಕರ್ತರನ್ನು ನೇಮಿಸಲಾಗಿದೆ. ದಿ.ಜನವರಿ 05 ರಿಂದ 31  ರವರೆಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
 ಈರಣ್ಣ ಪಾಂಚಾಳ, ರವಿಕುಮಾರ್, ಪ್ರಹಲ್ಲಾದ ಮೈತ್ರಿ, ಶಿವಶರಣಪ್ಪ ಮರಡ್ಡಿ, ಉಸೇನ ಹಸನ ಅಂಬರೀಶ ಸೇರಿದಂತೆ ಇತರರು ಇದ್ದರು.

About The Author