ಪಿಡಿಒ ಕೊಲೆ:ಬಂಧಿಸಲು ಆಗ್ರಹ

ಶಹಾಪೂರ:ಲಿಂಗಸುಗೂರು ತಾಲೂಕಿನ ಕೊಠ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಜದಂಡಯ್ಯ ಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿರುವದನ್ನು ಖಂಡಿಸಿ ಶಹಾಪುರ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಕೊಲೆಗಡುಕರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ರಾಜ್ಯದ ಸರಕಾರಿ ನೌಕರರಿಗೆ ಮತ್ತು ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಕಾನೂನು ತಿದ್ದುಪಡಿ ಮಾಡುವಂತೆ ಕೋರಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ  ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ ಪಿಡಿಒ ಸಂಘದ ಅಧ್ಯಕ್ಷರಾದ ಭೀಮನಗೌಡ ಬಿರಾದಾರ,ಕಾರ್ಯದರ್ಶಿಗಳ ಸಂಘದ ಅಧ್ಯಕ್ಷರಾದ ಗೋವಿಂದ ರಾಠೋಡ,  ಲೆಕ್ಕ ಸಹಾಯಕರ ಸಂಘದ ಅಧ್ಯಕ್ಷರಾದ ಮರಿಲಿಂಗಪ್ಪ, ಪಿಡಿಒ ಹಣಮಪ್ಪ ದೇವರಮನಿ, ದೇವರಾಜ,ಸುನಂದಾ, ಶಿವಾನಂದ ರೆಡ್ಡಿ ರಾಠೋಡ ವೀರೇಶ ವಡವಡಗಿ ಜಗನ್ನಾಥರೆಡ್ಡಿ ಮಹದೇವಪ್ಪಗೌಡ ನಾಗಪ್ಪಾ ಅಬ್ದುಲ್ ಭಾಷೆ  ಮುಲ್ಲಾ ರವೀಂದ್ರ ದೇಸಾಯಿ ಶಿವಾನಂದ ಸಿದ್ರಾ ಸೇರಿದಂತೆ ಇತರ ನೌಕರರು ಭಾಗವಹಿಸಿದ್ದರು

 

 

Leave a Reply

Your email address will not be published. Required fields are marked *