ಚಂದ್ರಕಲಾ ಗೂಗಲ್ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ – ಹರ್ಷ

ಶಹಾಪುರ : ಶಹಾಪುರ ತಾಲೂಕಿನ ಹಾಲಬಾವಿ ಸರಕಾರಿ ಹಿರಿಯ ಪ್ರಾಥಮಿಕ ಪ್ರಾಥಮಿಕ ಶಾಲೆಯ ಶಿಕ್ಷಕಿ ಚಂದ್ರಕಲಾ ಗೂಗಲ್ 2022 ನೇ ಸಾಲಿಗೆ ರಾಜ್ಯ ಸರಕಾರದ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೂಲತಃ ಶಹಾಪುರ ತಾಲೂಕಿನ ಸಗರ ಗ್ರಾಮದ  ಚಂದ್ರಕಲಾ ಗೂಗಲ್ ಅವರು ಸುಮಾರು ಹದಿನೇಳು ವರ್ಷಗಳಿಂದ ಶಾಲಾ ಶಿಕ್ಷಕರಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೆ ಸಲುವಾಗಿ ಈ ಪ್ರಶಸ್ತಿ ಸಂದಿದೆ ಎಂದು ಹೇಳಿದ್ದಾರೆ.

ಹರ್ಷ : ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ,ಬಸನಗೌಡ ಸುಬೇದಾರ,ಲಿಂಗಣ್ಣ ಪಡಶೆಟ್ಟಿ, ದೇವಿಂದ್ರಪ್ಪ ಹಡಪದ,ಶಾಲಾ ಶಿಕ್ಷಕರ ಸಂಘದ ರಾಯಪ್ಪಗೌಡ ಹುಡೇದ,ಶಿಕ್ಷಕ ಶರಣಬಸವ ಗಚ್ಚಿನಮನಿ,ಬಸವರಾಜ ಯಾಳಗಿ ಡಿಡಿಪಿಐ ಶಾಂತಗೌಡ ಪಾಟೀಲ್.ಕ್ಷೇತ್ರ ಶಿಕ್ಷಣಾಧಿಕಾರಿಗಳ ರುದ್ರಗೌಡ ಪಾಟೀಲ ಹಾಗೂ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *