ನಾಳೆ ಶಾಸಕ ದರ್ಶನಾಪುರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ,ಸಾರ್ವಜನಿಕರ ಕುಂದುಕೊರತೆ ಆಲಿಕೆ

ಶಹಾಪುರ: ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ನಾಳೆ ಸೆ.4ರಂದು ಶಹಾಪುರ ಮತಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 9.30ಕ್ಕೆ ಶಹಾಪುರ ನಗರದ ಬೆಟ್ಟದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದ ಸಮೀಪದ ಶ್ರೀ ಮಂದಾಕಿನಿ ಮಹಾಲಕ್ಷ್ಮಿ ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 10.30ಕ್ಕೆ ನಗರಸಭೆಯಲ್ಲಿ ನಡೆಯುವ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಾಲನೆ ನೀಡಲಿದ್ದಾರೆ.

11.30ಕ್ಕೆ ಶಹಾಪುರದ ಜನತಾ ಕಾಲೋನಿಯಲ್ಲಿ ಚಂದ್ರಶೇಖರ ಗುತ್ತೇದಾರ ಅವರ ಗೃಹಪ್ರವೇಶ, ಮಧ್ಯಾಹ್ನ 12.30ಕ್ಕೆ ಚಾಮನಾಳದಲ್ಲಿ ಮಹಾಂತಗೌಡ ಅವರ ಗೃಹಪ್ರವೇಶ ಹಾಗೂ 1 ಗಂಟೆಗೆ ಬೋವಿಕಾಡಮಗೇರಾದಲ್ಲಿ ಜಕ್ಟಯ್ಯ ತೋಟದ ಅವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1.30ರಿಂದ ಸಂಜೆ 4 ಗಂಟೆಯವರೆಗೆ ಭೀಮರಾಯನಗುಡಿ ಐಬಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಶಾಸಕರ ಗಮನಕ್ಕೆ ತರಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *