ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಧರ್ಮೇಂದ್ರ ಪ್ರಧಾನ ರಾಜೀನಾಮೆ ಸಂಭ್ರಮಾಚರಣೆ

ಶಹಾಪುರ,
 
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಜುಲೈ 25ರಂದು ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿ, ಶಹಾಪುರ ನಗರದ ಬಸವೇಶ್ವರ ಚೌಕದ ಸಮೀಪ ಸಮಾನ ಮನಸ್ಕರ ವೇದಿಕೆ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ವಿದ್ಯಾರ್ಥಿಗಳ ಹೋರಾಟಕ್ಕೆ ದೊರೆತಿರುವ ಈ ಗೆಲುವು ದೇಶದ ಪ್ರಜಾಪ್ರಭುತ್ವದ ಗೆಲುವಾಗಿದೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪರೀಕ್ಷೆಗಳ ವಿಶ್ವಾಸಾರ್ಹತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಕೇಂದ್ರ ಸರ್ಕಾರ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 ಆರ್. ಚನ್ನಬಸು, ಗಿರೆಪ್ಪಗೌಡ ಬಾಣತಿಹಾಳ, ಚನ್ನಪ್ಪ ಆನೆಗುಂದಿ, ಅಯ್ಯಣ್ಣ ಕನ್ಯಕೋಳೂರು, ಎಸ್.ಎಂ. ಸಾಗರ್, ಸೈಯದ್ ಖಾಲಿದ್, ಹೊನ್ನಪ್ಪ ಗಂಗನಾಳ, ರಾಮು ಸಾಗರ್, ಸೈಯದ್ ಖಾದ್ರಿ, ಶರಣಪ್ಪ ಭೂತಾಳಿ, ತಿಪ್ಪಣ್ಣ ಕ್ಯಾತನಾಳ, ಚಂದ್ರು ಜಾದವ್, ಚಂದ್ರಕಾಂತ್ ರಸ್ತಾಪುರ, ನಾಗರಾಜ್ ಬೊಮ್ಮನಹಳ್ಳಿ, ಕಾಳಪ್ಪ ಕುಳಗೇರಿ, ಮರೆಪ್ಪ ಸಲಾದಪುರ, ಮರೆಪ್ಪ ಮುಂಡಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *