Blog
ಪಂಚ ಗ್ಯಾರಂಟಿ ಯೋಜನೆಗಳ ಎಫೆಕ್ಟ್ : ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ?
ಬಸವರಾಜ ಕರೇಗಾರ
ಅಧಿಕಾರದಾಸೆಗೆ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆಗುವ ನಷ್ಟ ಎಷ್ಟು ಎನ್ನುವ ಬಗ್ಗೆ ಯಾರು ಪರಿಗಣಿಸುವುದಿಲ್ಲ. ಕರ್ನಾಟಕ ರಾಜ್ಯದಲ್ಲಿಯೂ ಕೂಡ ಪಂಚ ಉಚಿತ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಭಾರಿ ಹಿನ್ನಡೆಯಾಗಿದೆ ಎನ್ನಲಾಗಿದ್ದರೂ ಸರ್ಕಾರ ತೋರಿಸಿಕೊಳ್ಳುತ್ತಿಲ್ಲ. ವರ್ಷಕ್ಕೆ 60 ರಿಂದ 70,000 ಕೋಟಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಬಳಕೆಯಾಗುತ್ತಿದೆ ಎಂದು ಅಂದಾಜಿಸಲಾಗಿದ್ದು,ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನಲಾಗಿದೆ ?
ಗ್ಯಾರೆಂಟಿ ಯೋಜನೆಗಳಿಗೆ ಬಳಕೆಯಾದ ಹಣವನ್ನು ಸಂಗ್ರಹಿಸಲು ಸರಕಾರ ಪ್ರತಿಯೊಂದು ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಲಾಗಿದೆ. ಆದರೂ ಕೂಡ ಅಭಿವೃದ್ಧಿಯಾಗುತ್ತಿಲ್ಲ.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದೆ. ರಸ್ತೆಗಳಿಗೆ ಸರಿಯಾದ ಡಾಂಬರೀಕರಣವಿಲ್ಲ. ರಸ್ತೆಗಳಂತೂ ವಾಹನಗಳು ಓಡಾಡದ ಪರಿಸ್ಥಿತಿ ಉಂಟಾಗಿವೆ. ಹತ್ಯಿಗೂಡೂರಿನಿಂದ ವಡಗೇರಕ್ಕೆ ಹೋಗುವ ರಸ್ತೆಯನ್ನು ಮಾಜಿ ಸಚಿವ ಡಾ ಮಾಲಕರೆಡ್ಡಿ ಅವರ ಶಾಸಕರಾದ ಸಂದರ್ಭದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಪ್ರಸ್ತುತದಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಳೆದ ಸಾಲಿನ ಐದು ವರ್ಷಗಳ ಕಾಲ ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ ಅವರು ಶಾಸಕರಾದ ಸಂದರ್ಭದಲ್ಲಿಯೂ ರಸ್ತೆ ಸುಧಾರಿಸಿಲ್ಲ. ಪ್ರಸ್ತುತ ಕಾಂಗ್ರೆಸ್ ಪಕ್ಷದ ಸರ್ಕಾರವು ಕೂಡ ಕ್ಯಾರೆ ಎನ್ನುತ್ತಿಲ್ಲ. ಯಾದಗಿರಿ ಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಳಂತೂ ಹೇಳತೀರದಾಗಿವೆ. ಬಿಜೆಪಿ ಪಕ್ಷದಂತೆ ಕಾಂಗ್ರೆಸ್ ಪಕ್ಷವು ಕೂಡ ಇದುವರೆಗೂ ಬಡವರಿಗೆ ಸರಿಯಾಗಿ ಜನತಾ ಮನೆಗಳನ್ನು ಒದಗಿಸಿಕೊಡಲು ವಿಫಲವಾಗಿದೆ. ಶಹಾಪುರದಿಂದ ಸಿಂದಗಿ ಮಾರ್ಗವಾಗಿ ಹೋಗುವ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನಗಳು ಓಡಾಡದ ಸ್ಥಿತಿ ಉಂಟಾಗಿದೆ. ಇದು ಹೀಗೆ ಮುಂದುವರೆದರೆ ಗ್ಯಾರಂಟಿ ಹೆಸರಿನಡಿ ಸರ್ಕಾರ ಮುಂದುವರೆಯುತ್ತದೆಯೇ ಹೊರತು ರಾಜ್ಯದ ಅಭಿವೃದ್ಧಿಪರ ಯೋಜನೆಗಳು ಜಾರಿಗೆ ಬರುವುದು ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಿದೆ.

ಶಕ್ತಿ ಯೋಜನೆ ಪುರುಷರ ಸ್ಥಿತಿ ಹೇಳತಿರದು.
ಸರಕಾರ ಮಹಿಳೆಯರಿಗೆ ಶಕ್ತಿ ಯೋಜನೆಯ ಹೆಸರಿನಡಿ ರಾಜ್ಯಾದ್ಯಂತ ಉಚಿತ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಂಚಾರ ಒದಗಿಸಿಕೊಟ್ಟಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಒಂದು ಬಸ್ಸಿನಲ್ಲಿ ಶೇ. 50ರಷ್ಟು ಪುರುಷರಿಗೆ ಸ್ಥಳ(ಸೀಟ್) ಮೀಸಲಿಡಬೇಕು ಎಂದು ಆದೇಶವಿದ್ದರೂ ಪಾಲನೆಯಾಗದೆ ಇರುವುದು ದೊಡ್ಡ ದುರಂತ. ಪ್ರತಿ ಬಸ್ಗಳಲ್ಲಿ ಮಹಿಳೆಯರೇ ಸಿಂಹ ಪಾಲು. ಪುರುಷರು ಹಣಕೊಟ್ಟರು ನಿಂತು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಶೇ. 50ರಷ್ಟು ಪುರುಷರಿಗೆ ಮೀಸಲಿರುವ ಸ್ಥಳಗಳನ್ನು ಪಾಲಿಸದ ಕೆ ಎಸ್ ಆರ್ ಟಿ ಸಿ ನಿರ್ವಾಹಕರು ಮೌನವಹಿಸಿದ್ದಾರೆ.ಶಕ್ತಿ ಯೋಜನೆಯಿಂದ ಸರಕಾರಕ್ಕೆ ಭಾರಿ ನಷ್ಟವಾಗುತ್ತಿದೆ ಎನ್ನಲಾಗಿದೆ. ಆದರೂ ತೋರಿಸಿ ಕೊಳ್ಳುತ್ತಿಲ್ಲ. ಈ ಯೋಜನೆಯಿಂದಾಗಿ ಶಾಲಾ ಮಕ್ಕಳಿಗೆ, ಪೋಷರಿಗೆ ಬಹುದೊಡ್ಡ ತೊಂದರೆಯಾಗಿದೆ. ಶಾಲಾ ಮಕ್ಕಳು ಸೇರಿದಂತೆ ಪುರುಷರು,ಮಹಿಳೆಯರು ಸೀಟ್ ಹಿಡಿದುಕೊಳ್ಳಲು ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂಗವಿಕಲರಾಗಿದ್ದಾರೆ. ಬಸ್ಗಳಲ್ಲಿ ಅಂಗವಿಕಲರಿಗೆ,ಹಿರಿಯರಿಗೆ ಕ್ಯಾರೆ
ಎನ್ನುತ್ತಿಲ್ಲ ಜನರು. ಯಾವ ಮಟ್ಟಕ್ಕೆ ತಲುಪಿದೆ ಶಕ್ತಿ ಯೋಜನೆ ಎನ್ನುವುದು ಅರ್ಥಮಾಡಿಕೊಳ್ಳಬೇಕಿದೆ. ಮಹಿಳೆಯರು ತಮ್ಮ ಊರಿನಿಂದ ಪಕ್ಕದ ಊರಿನಲ್ಲಿ ತಮ್ಮ ಜಮೀನಿಗೆ ಹೋಗಬೇಕಾದರೆ ಬಸ್ಗಳ ಮುಖಾಂತರ ಉಚಿತವಾಗಿ ಹೋಗುವ ಹಲವಾರು ಸಂದರ್ಭಗಳು ನಮ್ಮ ಕಣ್ಮುಂದೆ ಗೋಚರಿಸುತ್ತಿವೆ. ಶಕ್ತಿ ಯೋಜನೆ ಎಷ್ಟು ದುರುಪಯೋಗವಾಗುತ್ತಿದೆ ಎನ್ನುವುದು ನಮ್ಮ ಕಣ್ಮುಂದೆ ಇದ್ದರೂ ಕೂಡ ಸರಕಾರ ಕಣ್ಣು ಮುಚ್ಚಿ ಕುಳಿತಿದೆ.

ಗ್ಯಾರೆಂಟಿ ಯೋಜನೆಗಳಿಗೆ ತಡೆ ನೀಡಲು ನ್ಯಾಯಾಲಯವು ಮಧ್ಯಪ್ರವೇಶಿಸುವುದು ಅನಿವಾರ್ಯವೇ?.
ಅನಿವಾರ್ಯ ಸಂದರ್ಭದಲ್ಲಿ ಸರಕಾರಗಳು ದಾರಿ ತಪ್ಪಿದಾಗ ನ್ಯಾಯಾಂಗವು ಮದ್ಯೆ ಪ್ರವೇಶಿಸುವುದು ಅನಿವಾರ್ಯವಾಗುತ್ತದೆ. ಅದೇ ರೀತಿಯಾಗಿ ಚುನಾವಣಾ ಪೂರ್ವದಲ್ಲಿ ಹಲವಾರು ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಮಾರಕವಾಗುವಂತಹ ಯೋಜನೆಗಳನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿಯ ದೃಷ್ಟಿಯಿಂದ ತಡೆ ನೀಡುವುದು ಒಳಿತು.
*****************
ಕರ್ನಾಟಕದಲ್ಲಿ ಪ್ರಬಲ ವಿರೋಧ ಪಕ್ಷವಿಲ್ಲ.
ಅಧಿಕಾರದಾಸೆಗಾಗಿ ತಮ್ಮ ಗೆಲುವನ್ನು ಸುಲಭವಾಗಿಸಿಕೊಳ್ಳಲು ಹೊಂದಾಣಿಕೆ ರಾಜಕೀಯದೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ತಮ್ಮ ಗೆಲುವಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುವರು. ವಿರೋಧಪಕ್ಷದವರು ಅಧಿಕಾರದ ಪಕ್ಷದಲ್ಲಿರುವವರ ದೋಷಗಳನ್ನು ಪತ್ತೆ ಹಚ್ಚಿ ಪ್ರಬಲ ಹೋರಾಟ ಮಾಡಬಹುದು. ಆದರೆ ರಾಜ್ಯದಲ್ಲಿ ಅದು ಆಗುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಪ್ರಬಲವಾದ ಹೋರಾಟದ ಧ್ವನಿ ಎತ್ತದೆ ಇರುವುದು ದುರಂತ.