Blog
ಸರ್ಕಾರಿ ತಾಲೂಕ ನೌಕರರ ಪದಗ್ರಹಣ ಕಾರ್ಯಕ್ರಮ :: ಸರ್ಕಾರಿ ನೌಕರರು ಜನಸಾಮಾನ್ಯರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು
ಶಹಾಪುರ :: ಸರ್ಕಾರದ ಯಾವುದೇ ಇಲಾಖೆಯಲ್ಲಿ ನೌಕರರು ಸಮಾನರಾಗಿ ಕೆಲಸ ಮಾಡಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಅಲ್ಲದೇ ನೌಕರರ ಸಂಘದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬಾರದು. ಸರ್ಕಾರಿ ನೌಕರರು ಜನಸಾಮಾನ್ಯರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಸರಕಾರಿ ನೌಕರರಿಗೆ ಒಗ್ಗಟ್ಟು ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಸಂಘದಲ್ಲಿ ಒಡಕು ಬಾರದಂತೆ ನೋಡಿಕೊಳ್ಳುವುದು ತಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಅಮರೇಶ ಗೌಡ ದರ್ಶನಾಪುರ ಹೇಳಿದರು.
ನಗರದ ಮೋಟಗಿ ಫಂಕ್ಷನ್ ಸಭಾಂಗಣನಲ್ಲಿ ಕರ್ನಾಟಕ ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ನೌಕರರು ಸಮಾನರು. ಸರ್ಕಾರದ ಹಾಗೂ ಸಮಾಜದ ಜವಾಬ್ದಾರಿ ನೌಕರರ ಮೇಲಿದೆ. ಇಲಾಖೆಯಲ್ಲಿನ ಸಮಸ್ಯೆಗಳನ್ನು ಸಂಘದ ಗಮನಕ್ಕೆ ತರಬೇಕು. ಸಂಘವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸುರಪುರ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಸಜ್ಜನ್ ಅವರು, ನೌಕರರಿಗೆ ಯಾವುದೇ ಸಮಯದಲ್ಲಿ ಸಂಘವು ಸಹಾಯ ಹಸ್ತ ನೀಡಲು ಮುಂದಾಗಬೇಕು. ನೌಕರರಲ್ಲಿ ಯಾವುದೇ ರೀತಿಯ ಭೇದ- ಭಾವ ಇರದೇ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಕಾರ್ಯನಿರ್ವಹಿಸಬೇಕು. ಸಕಾಲ ಬಂದ ಮೇಲೆ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗತೊಡಗಿದೆ. ಒತ್ತಡ ಕಡಿಮೆಯಾದಾಗ ನೌಕರರು ಚೆನ್ನಾಗಿ ಕೆಲಸ ನಿರ್ವಹಿಸಬಹುದು. ನೌಕರರಲ್ಲಿ ಆತ್ಮಸ್ಥೈರ್ಯ, ತಾಳ್ಮೆ ಇರಬೇಕು. ಕಾನೂನು ಪರಿಧಿಯೊಳಗೆ ಕೆಲಸ ಮಾಡಬೇಕಾಗುತ್ತದೆ. ನೌಕರರು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಸಂಘವು ನಿರ್ಮಾಣ ಮಾಡಬೇಕೆಂದರು.
2 ನೇ ಅವಧಿಗೆ ಸಂಘದ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ರಾಯಪ್ಪಗೌಡ ಹುಡೇದ ಅವರು, ಎಲ್ಲಾ ಸರಕಾರಿ ನೌಕರರ ಬೆಂಬಲ ಮತ್ತು ಪ್ರೋತ್ಸಾಹದಿಂದಾಗಿ ಎರಡನೇ ಅವಧಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಹಾಗೂ ಇದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬೇರೆ ಕಡೆ ಪ್ರಬಲ ಪೈಪೋಟಿ ನಡೆದು ಚುನಾವಣೆಗಳು ನಡೆದವು ಆದರೆ ನಮ್ಮ ತಾಲೂಕಿನಲ್ಲಿ ಸರ್ಕಾರಿ ನೌಕರರ ಸಂಘದ 2024-29ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲಾಗಿ ದ್ದು ತಾಲ್ಲೂಕಿನಲ್ಲಿರುವ 34 ಇಲಾಖೆಗಳ ಪೈಕಿ 33 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಭೂಮಾಪನ ಇಲಾಖೆಯ ಒಂದು ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹವೆ ಕಾರಣವಾಗಿದೆ. ತಮ್ಮ ಯಾವುದೇ ಸಮಸ್ಯೆಗಳಿಗೆ ಸಂಘವು ಬೆಂಬಲವಾಗಿ ನಿಂತು ಸಮಸ್ಯೆ ಬಗೆ ಹರಿಯುವರಿಗೆ ನಿಮ್ಮ ಜೊತೆ ನಿಲ್ಲುತ್ತದೆ ಎಂದು ಭರವಸೆ ಕೊಡುತ್ತೇನೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮತ್ತು ಕಾನೂನು ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕು. ಒಂದು ಸರಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಅದಕ್ಕೆ ಸರಕಾರಿ ನೌಕರರ ಸೇವೆ ಪ್ರಮುಖ ಕಾರಣವಾಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಸಂಘದ ಏಳಿಗೆಗಾಗಿ ಮತ್ತು ಎಲ್ಲರ ಕ್ಷೇಮವಾಗಿ ದುಡಿಯೋಣ ಎಂದರು.
ಈ ಕಾರ್ಯಕ್ರಮದಲ್ಲಿ, ಶಹಾಪುರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಬಸವರಾಜ್ ಶರ್ ಬೈ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ದರ್ಶನಾಪುರ್, ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಾಲೂಕು ಖಜಾನೆ ಅಧಿಕಾರಿ ಮೋನಪ್ಪ ಶಿರವಾಳ, ಬಿಸಿಎಂ ಅಧಿಕಾರಿ ಚನ್ನಪ್ಪ ಗೌಡ ಚೌದ್ರಿ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಂ ನಾರಾಯಣ, ಮುಖಂಡರಾದ ಎನ್ ಸಿ ಪಾಟೀಲ್, ಮಾಣಿಕ್ ರೆಡ್ಡಿ ಮಲಾರ್, ಭೀಮನಗೌಡ ತಳೆವಾಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದಪ್ಪ, ಮಾಜಿ ಅಧ್ಯಕ್ಷ ಬಸವರಾಜ್ ಯಾಳಗಿ, ರಾಮನಗೌಡ ಖಾನಾಪುರ್, ಪಕೀರಪ್ಪ ಗೌಡ ಗೋನಾಲ್, ದೇವರಾಜ್ ಗೋನಾಲ್, ಸಿದ್ದರಾಮಪ್ಪ ಕ್ಯಾತನಟಿ, ಗೋವಿಂದ ರಾಥೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ನೂತನಪದಾಧಿಕಾರಿಗಳು.
ರಾಯಪ್ಪಗೌಡ ಹುಡೆದ (ಅಧ್ಯಕ್ಷ)
ಡಾ. ಎಂ ಎಸ್ ಶಿರವಾಳ (ಗೌರವಾಧ್ಯಕ್ಷ)
ಬಸವರಾಜ್ ಬೆಳ್ಳಿಕಟ್ಟಿ (ಖಜಾಂಚಿ),
ಕಾರ್ಯದರ್ಶಿಯಾದ ಮಲ್ಲಿಕಾರ್ಜುನ್ ಸಜ್ಜನ್
ನೂತನ ನಿರ್ದೇಶಕರುಗಳಾದ
ಶಾಂತರೆಡ್ಡಿ ತುಂಬಿಗಿ, ಪ್ರಶಾಂತ್ ನೇಕಾರ್, ವೀರ ಸಂಗಯ್ಯ, ಚನ್ನಪ್ಪ ಗೌಡ ಚೌದ್ರಿ, ಶಶಿಕಾಂತ್ ಗುತ್ತೇದಾರ, ನಿಂಗಣ್ಣ ಗೋನಾಲ್, ಮಲ್ಲಪ್ಪ ಸಜ್ಜನ್, ರೇವಣಸಿದ್ದೇಶ್ವರ, ರಾಜಶೇಖರಯ್ಯ ಸ್ವಾಮಿ, ಸಿದ್ದನಗೌಡ ಬಿರಾದಾರ್, ನಾಗರಾಜ್ ಹೂಗಾರ್, ಚಂದ್ರಕಾಂತ್ ಬಾಸುತಕರ್, ಶಂಕರಗೌಡ ಪಾಟೀಲ್, ವೆಂಕಟೇಶ್ ಮಡಿವಾಳಪ್ಪ ಮಡಿವಾಳಕರ್, ಅಬ್ದುಲ್ ವಾಹಿದ್, ಬಸವರಾಜ್ ಚಲವಾದಿ, ಸಂಗಣ್ಣ ನುಚ್ಚಿನ್, ಶರಬಣ್ಣ, ಪ್ರೀತಿ ದೇಸಾಯಿ, ರಜಿಯಾಬೇಗಂ, ಹನುಮಂತರಾಯಗೌಡ ಬಿರಾದಾರ್, ಪ್ರಶಾಂತ್ ಗುಗ್ಗರಿ, ಆನಂದ್ ಮಾಲಿ ಪಾಟೀಲ್, ಅಮರಣ್ಣ ಕೊಬ್ಬರಿ, ಬಸವರಾಜ್ ಕಣಜಿಗಿ, ರಾವುತಪ್ಪ, ಕೃಷ್ಣಮೂರ್ತಿ ಯಾದವ್ ಇವರುಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.