Blog
ಕಾಳಿಕಾದೇವಿ ಮೂರ್ತಿ ಪ್ರತಿಷ್ಠಾಪನೆಯ ೧೪ನೇ ವಾರ್ಷಿಕೋತ್ಸವ, ಜಾತ್ರಾ ಸಮಾರಂಭ :: ಶರಣರ ತತ್ವಾದರ್ಶ ಸದಾಕಾಲ ಪ್ರಸ್ತುತ : ಸಚಿವ ದರ್ಶನಾಪುರ
ಶಹಾಪುರ: ಸಗರನಾಡು ಪುಣ್ಯದ ನಾಡು, ಇಲ್ಲಿ ಹಲವಾರು ಶರಣರು ನೆಲೆಸಿದ ನಾಡು, ತಿಂಥಣಿಯ ಮೌನೇಶ್ವರರು, ಕೊಡೆಕಲ್ ಬಸವೇಶ್ವರರು, ಶಹಾಪುರದ ಚರಬಸವೇಶ್ವರ ಮಹಾತ್ಮರು ಹಾಗೂ ಮುದನೂರಿನ ದೇವರ ದಾಸಿಮಯ್ಯರಂತಹ ಶರಣರು ನೆಲೆಸಿದ ಬೀಡಿದು, ಪ್ರಸ್ತುತ ಯುವ ಪೀಳಿಗೆ ಶರಣರ ತತ್ವಾದರ್ಶಗಳನ್ನು ಧಾರ್ಮಿಕ ತತ್ವಗಳನ್ನು ಅಳವಡಿಸಿಕೊಂಡಾಗ ಒಳ್ಳೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ವಿಶ್ವಕರ್ಮ ಏಕದಂಡಗಿ ಮಠದಲ್ಲಿ ಶ್ರೀ ಕಾಳಿಕಾದೇವಿ ಮೂರ್ತಿ ಪ್ರತಿಷ್ಠಾಪನೆಯ ೧೪ನೇ ವಾರ್ಷಿಕೋತ್ಸವ ಮತ್ತು ಜಾತ್ರಾ ಸಮಾರಂಭದಲ್ಲಿ ಶ್ರೀ ಮೌನೇಶ್ವರರ ಪುರಾಣ ಮಂಗಲ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಠಗಳ ಪಾತ್ರ ದೊಡ್ಡದು, ಸರಕಾರದ ಕೆಲಸಗಳನ್ನು ಮಠಮಾನ್ಯಗಳು ಮಾಡುತ್ತಿವೆ, ಸಮಾಜದಲ್ಲಿ ಶಾಂತಿ ಮಂತ್ರವನ್ನು ಮಠಾಧೀಶರು ಬಿತ್ತುತ್ತಿದ್ದಾರೆ, ನಾವೆಲ್ಲರೂ ಮಠಮಾನ್ಯಗಳನ್ನು ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ಪರಮಪೂಜ್ಯ ಅಜೇಂದ್ರ ಮಹಾಸ್ವಾಮಿಗಳು, ಪೂಜ್ಯಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಪೂಜ್ಯ ಶ್ರೀ ವಿರುಪಾಕ್ಷ ಮಹಾಸ್ವಾಮಿಗಳು, ವೇದಮೂರ್ತಿ ಬಸವಯ್ಯ ಶರಣರು ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ದೇವೇಂದ್ರಪ್ಪ ಕನ್ಯಾಕೋಳೂರು, ಲಕ್ಷ್ಮಣ ಕಂಬಾರ, ಸಂತೋಷ ಪತ್ತಾರ, ಸುಧಾಕರ ಅಣಿಕೆರಿ, ಶಂಕರ ಪತ್ತಾರ, ರವೀಂದ್ರನಾಥ ಪತ್ತಾರ, ಅಶೋಕ ಹಳೆಪೇಟೆ, ಅಶೋಕ ಕುಳಗೇರಿ, ರಮೇಶ ದೋರನಹಳ್ಳಿ, ರವಿ.ಎಂ.ದೋರನಹಳ್ಳಿ, ಉಗ್ರೇಶ ಪತ್ತಾರ, ಅನೀಲ ಬಡಿಗೇರ ಸೇರಿದಂತೆ ಪ್ರಮುಖರು ಇದ್ದರು.