ಕರ್ನಾಟಕ ಪ್ರದೇಶ ಕುರುಬರ ಸಂಘದ ನಗರ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ಶಾಂತಾ ನೇಮಕ

ವಡಗೇರ : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಮಂಜುಳಾ ನಾರಾಯಣನ್ ರವರ ಆದೇಶದ ಮೇರೆಗೆ ಬೆಂಗಳೂರು ನಗರ ಜಿಲ್ಲಾಧ್ಯಕ್ಷರನ್ನಾಗಿ ಶ್ರೀಮತಿ ಶಾಂತಾ ಶ್ರೀನಿವಾಸನ್ ರವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಶ್ರೀಮತಿ ಮಂಜುಳ ನಾರಾಯಣನ್ ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕಿನಾದ್ಯಂತ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದ್ದು, ಕೂಡಲೇ ಆಯ್ಕೆಯಾದವರು ಸಮಾಜದ ಒಳಿತಿಗಾಗಿ ಹಾಲುಮತದವರ ಏಳಿಗೆಗಾಗಿ ದುಡಿಯುತ್ತ ಸಂಘಟನೆಯಲ್ಲಿ ಪಾಲ್ಗೊಂಡು ಗ್ರಾಮೀಣ ಪ್ರದೇಶದಲ್ಲಿ ಸಂಘಟನೆಗೆ ಹೆಚ್ಚು ಓತ್ತು ಕೊಡಬೇಕೆಂದು ತಿಳಿಸಿದರು. ಇನ್ನೂ ಕೆಲವೇ ದಿನಗಳಲ್ಲಿ ರಾಯಚೂರಿಗೆ ಪ್ರಯಾಣ ಬೆಳೆಸಲಿದ್ದು ಮಹಿಳಾ ಪದಾಧಿಕಾರಿಗಳನ್ನು ನೇಮಕ ಮಾಡಿ ಕುರುಬ ಸಮಾಜದ ಮಹಿಳೆಯರು ಕೂಡ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಬೆಂಗಳೂರು ನಗರ ಕಾರ್ಯಾಧ್ಯಕ್ಷರಾದ ಶಂಕರ ಮೌರ್ಯ ಹಾಗೂ ಶ್ರೀನಿವಾಸ, ದರ್ಶನ ಸೇರಿದಂತೆ ಇತರರು ಇದ್ದರು.

About The Author