ಪೆಟ್ರೋಲ್ ಡೀಸೆಲ್ ಬಂಕ್ ಗಳ ಮುಂದೆ ಮುಗಿಬಿದ್ದ ಜನ

ಶಹಾಪುರ,,

 ತಾಲೂಕಿನ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಗಳ ಮುಂದೆ ನೂರಾರು ವಾಹನಗಳು ಪೆಟ್ರೋಲ್ ಮತ್ತು ಡೀಸೆಲ್ ತೆಗೆದುಕೊಳ್ಳಲು ಮುಗಿಬಿದ್ದಿವೆ. ಮುಂದಿನ ಎರಡು ಮೂರು ದಿನಗಳಲ್ಲಿ ಎರಡು ಮೂರು ದಿನಗಳ ಕಾಲ ಪೆಟ್ರೋಲ್ ಸಿಗುವುದಿಲ್ಲ ಎನ್ನುವ ಊಹಾಪೋಹದ ಮಾತುಗಳನ್ನು ಕೇಳಿದ ಜನರು ಬಂಕ್ ಗಳ ಮುಂದೆ ಡೀಸೆಲ್ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಬಂಕ್ ಡೀಲರ್ಗಳಿಗೆ ಈಗಾಗಲೇ ಬೆಲೆ ಏರಿಕೆ ಸಂದೇಶ ಬಂದಿರಬಹುದು ಎನ್ನಲಾಗಿದ್ದು, ಪೆಟ್ರೋಲ್ ಸಿಗದೆ ಇರಬಹುದು ಎಂದು ವಾಹನ ಡೀಸೆಲನ್ನು ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬಂಕಗಳ ಮುಂದೆ ವಾಹನ ಸವಾರರು 1000 ರಿಂದ 2000 ವರೆಗೆ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಟ್ರ್ಯಾಕ್ಟರ್ ಗಳಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಬ್ಯಾರಲ್ ಗಟ್ಟಲೆ ಡೀಸೆಲ್ ತೆಗೆದುಕೊಂಡು ಹೋಗುತ್ತಿರುವುದು ಕಂಡುಬರುತ್ತಿದೆ. ಸರ್ಕಾರ ಮಾತ್ರ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದೆ.

Leave a Reply

Your email address will not be published. Required fields are marked *