Blog

ದಿ.ಬಾಪುಗೌಡ ದರ್ಶನಾಪುರ ಪುಣ್ಯಸ್ಮರಣೋತ್ಸವ :: ಸಗರನಾಡಿನ ಧೀಮಂತ ನಾಯಕ, ಶೋಷಿತರ ಧ್ವನಿ ಬಡವರ ಏಳಿಗೆಗಾಗಿ ದುಡಿದ ಬಾಪುಗೌಡರ ಕಾರ್ಯಗಳು ಶ್ಲಾಘನೀಯ

ಬಸವರಾಜ ಕರೇಗಾರ

ಶಹಾಪುರ :: ಸಗರ ನಾಡಿನ ಧೀಮಂತ ನಾಯಕ, ಶೋಷಿತರ ಬಡವರ ಧ್ವನಿಯಾಗಿದ್ದ ದಿ. ಬಾಪುಗೌಡ ದರ್ಶನಾಪುರ ಅವರು ಇಂದು ನಮ್ಮನ್ನಗಲಿ 36 ವರ್ಷಗಳಾದವು. ನಗರದ ಭೀಮರಾಯನಗುಡಿ ವೃತ್ತದಲ್ಲಿರುವ ಪುತ್ತಳಿಗೆ ಬೆ. 9:30 ಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ನಂತರ ಚರಬಸವೇಶ್ವರ ಪ್ರೌಢಶಾಲೆಯಲ್ಲಿ 10 ಗಂಟೆಗೆ ಪುಣ್ಯಸ್ಮರಣೆಯ ನಿಮಿತ್ತ ಪೂಜ್ಯರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರಗುವುದು.ಸಚಿವರು ಸಂಬಂದಿಕರು ಪುತ್ರರು ಅವರು ಹಿತೈಷಿಗಳು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಬಾಪುಗೌಡರು ಹಿಂದುಳಿದ ವರ್ಗದ ನಾಯಕರಾಗಿದ್ದರು. ಯಾವತ್ತೂ ಬಡವರೆಂದರೆ ಎಲ್ಲಿಲ್ಲದ ಪ್ರೀತಿ ವಾತ್ಸಲ್ಯ ಅವರಲ್ಲಿ ಒಡಮೂಡುತ್ತಿತ್ತು. ಒಂದು ಸಮಾಜದ ನಾಯಕರೆಂದು ಎಂದು ಗುರುತಿಸಿಕೊಳ್ಳಲಿಲ್ಲ. ಎಲ್ಲಾ ಸಮುದಾಯದವರನ್ನು ಒಂದೇ ರೀತಿಯಲ್ಲಿ ಕಂಡವರು ಬಾಬುಗೌಡರು. ಒಬ್ಬ ವ್ಯಕ್ತಿಯ ಹೆಸರು ಜನರ ಮನದಾಳದಲ್ಲಿ ಉಳಿಯಬೇಕೆಂದರೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿ.

ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ದರ್ಶನಾಪುರ ಗ್ರಾಮದ ತಂದೆ ರಾಯಪ್ಪಗೌಡ ತಾಯಿ ತಿಪ್ಪಮ್ಮ ಗೌಡ್ತಿ
ಆದರ್ಶ ದಂಪತಿಗಳ ಮಗನಾಗಿ ಕೃಷಿ ಕುಟುಂಬದಲ್ಲಿ ಬಾಪುಗೌಡರು ಜನಿಸಿದರು.

1958-59 ರಲ್ಲಿ ಬಾಪುಗೌಡರು ಶಹಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ಅಗ್ರಿಕಲ್ಚರ್ ಕ್ರೆಡಿಟ್ ಸೊಸೈಟಿ ಸಹಕಾರ ಸಂಘದ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅದರ ಅಧ್ಯಕ್ಷರಾದರು. ಹಾಲಿನ, ಮೀನುಗಾರರ, ಕೋಳಿ ಸಾಕಾಣಿಕಗಾರರ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಿ ಬಡವರಿಗೆ ಉದ್ಯೋಗ ಕಲ್ಪಿಸಿಕೊಳ್ಳುವಂತೆ ಮಾಡಿದರು.

1960ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. 1962ರಲ್ಲಿ ಜಿಡಿಸಿಸಿ ಬ್ಯಾಂಕ್ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು.1967ರಲ್ಲಿ ಶಾಸಕರಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಕೃಷ್ಣ ಮೇಲ್ದಂಡೆ ಯೋಜನೆಗೆ ಒತ್ತು,1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ ಸರಕಾರದ ಮುಖ್ಯ ಸಚೇತಕರಾಗಿ ಆಯ್ಕೆ, 1984ರಲ್ಲಿ ಸಣ್ಣ ಕೈಗಾರಿಕೆ ಸಚಿವರಾದರು. 1985ರಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷರಾದರು.

ರೈತರ ಸಮಸ್ಯೆಗಳನ್ನು ಅರಿತ ಬಾಪು ಗೌಡರು ಕೃಷ್ಣ ಮೇಲ್ದಂಡೆ ಯೋಜನೆಯ ಮುಖ್ಯ ಕಚೇರಿಯನ್ನು ಭೀಮರಾಯನ ಗುಡಿಯಲ್ಲಿ ಪ್ರಾರಂಭಿಸಿದರು. ಸಗರನಾಡಿಗೆ ನೀರಾವರಿ ಸೌಲಭ್ಯ ಒದಗಿಸಿ ಕೊಟ್ಟರು. ಶಿಕ್ಷಣಕ್ಕೆ ಒತ್ತು ನೀಡಿದ ಬಾಪುಗೌಡರು ಚರಬಸವೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿ ಮಹಿಳಾ ಶಿಕ್ಷಣಕ್ಕೆ ಒತ್ತುಕೊಟ್ಟು ಪ್ರಾಥಮಿಕ ಶಿಕ್ಷಣದಿಂದಿಡಿದು ಕಾಲೇಜು ಶಿಕ್ಷಣದ ವರೆಗೆ ಶಿಕ್ಷಣ ನೀಡಿದರು.

ಶಾಸಕರಾಗಿ ಸಚಿವರಾಗಿ ಗ್ರಾಮೀಣ ರಸ್ತೆಗಳ ಸುಧಾರಣೆ, ಕುಡಿಯುವ ನೀರಿಗೆ ಒತ್ತು, ಆರೋಗ್ಯ ಕೇಂದ್ರಗಳ ಸ್ಥಾಪನೆ, ವಿದ್ಯುತ್ ಕೇಂದ್ರಗಳ ಸ್ಥಾಪನೆ, ವಸತಿ ಶಾಲೆಗಳ ಸ್ಥಾಪನೆ ಸೇರಿದಂತೆ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ತಾಲೂಕಿಗೆ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಬಾಬುಗೌಡರು. ಇಂದು ಅವರು ಮಾಡಿದ ಕಾರ್ಯಗಳು ನಮ್ಮ ಕಣ್ಮುಂದೆ ರಾರಾಜಿಸುತ್ತಿವೆ.

ತಂದೆಗೆ ತಕ್ಕ ಪುತ್ರರಾದ ಸಚಿವ ಶರಣಬಸಪ್ಪಗೌಡ ದರ್ಶನಾಪುರ.

ಪ್ರಸ್ತುತ ಅವರ ಪುತ್ರರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಸಚಿವರಾಗಿದ್ದು, ತಂದೆಯವರ ಮಾರ್ಗದರ್ಶನದಲ್ಲಿ ಬಡವರ ಏಳಿಗೆಗಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು,ಸಮಸ್ಯೆಗಳನ್ನ ಆಧರಿಸಿ ತಮ್ಮನ್ನು ಭೇಟಿ ಮಾಡುವಂತೆ ಸಾರ್ವಜನಿಕರಿಗೆ ತಿಳಿಸುತ್ತಾ, ದಿನಂಪ್ರತಿ ನೂರಾರು ಜನರ ಸಮಸ್ಯೆಗಳನ್ನು ನಿವಾರಿಸುತ್ತಾ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಶೋಷಿತರ ಬಡವರ ಏಳಿಗೆಗಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಜಾತೀಯತೆಯನ್ನು ಬದಿಗೊತ್ತಿ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು
ಜನರ ಹಿತಕ್ಕಾಗಿ ಧಾರ್ಮಿಕ ಕಾರ್ಯಗಳು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದಕ್ಕೆ ತಂದೆಗೆ ತಕ್ಕ ಮಗ ಎನ್ನುವರು. ಬಾಪುಗೌಡರ ಆದರ್ಶಗಳು ಇಂದಿಗೂ ನಮಗೆ ದಾರಿದೀಪವಾಗಲಿ ಎಂದು ಆಶಿಸುತ್ತಾ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳೋಣ.

About The Author