ಪ.ಜಾ.ಪ.ಪ‌‌ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಡಾ. ಸಂಘರ್ಷ ನೇಮಕ

ಶಹಾಪುರ :ಸರಕಾರಿ ಪದವಿ ಕಾಲೇಜುಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅತಿಥಿ ಉಪನ್ಯಾಸಕರ ಸಂಘದ ಶಹಾಪುರ ತಾಲೂಕ ಅಧ್ಯಕ್ಷರಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ಡಾ. ಶರಣಪ್ಪ ಎಮ್. ಸಂಘರ್ಷ ಅವರು ನೇಮಕವಾಗಿದ್ದಾರೆ ಎಂದು ರಾಜ್ಯ ಅಧ್ಯಕ್ಷ ಕಾಂತಕುಮಾರ ಅವರು ತಿಳಿಸಿದ್ದಾರೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳು, ಬೇಡಿಕೆಗಳು ಸರ್ಕಾರದ ಗಮನಕ್ಕೆ ತರುವುದರ ಮೂಲಕ ಅವುಗಳನ್ನು ಪರಿಹರಿಸಲು ಸಂಘನಾತ್ಮಕವಾಗಿ ಶ್ರಮಿಸುವ ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಅವರು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಉಪಾಧ್ಯಕ್ಷರಾಗಿ ಡಾ. ಚಂದ್ರಶೇಖರ ಹದ್ದೆಗೋಳ, ಕಾರ್ಯದರ್ಶಿಯಾಗಿ ಡಾ.ಮಾನಪ್ಪ ಬಿ. ಅಗ್ನಿ, ಮಹಿಳಾ ಪ್ರತಿನಿಧಿಯಾಗಿ ಡಾ. ಮೀನಾ ಎಮ್. ಬೆಂಡೆ, ಪ್ರೀಯಾಂಕ ಜೆ. ಖಜಾಂಚಿಯಾಗಿ ಡಾ. ಭೀಮರಾಯನ ಕನ್ಯಾಕೋಳೂರ ಅವರನ್ನು ನೇಮಕಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *