Blog
ಮಾಧ್ಯಮಗಳ ಮೇಲಿನ ಸವಾರಿ ಆತಂಕಕಾರಿ : ಪತ್ರಕರ್ತನ ಮೇಲಿನ ಪ್ರಕರಣ ರದ್ದಿಗೆ ಸಂಕೀನ್ ಆಗ್ರಹ
ಯಾದಗಿರಿ,,
ಪತ್ರಕರ್ತ ನಾಗರಾಜ ನ್ಯಾಮತಿ ಮೇಲೆ ಸುರಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಲು ಎಸ್ಪಿ ಅವರು ಅಗತ್ಯವಾದ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಆಗ್ರಹಿಸಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿನಾಕಾರಣ ಪ್ರಕರಣ ದಾಖಲು ಮಾಡಲಾಗಿ. ಇದು ಮಾರಕ ಬೆಳವಣಿಗೆಯಾಗಿದೆ ಎಂದರು.
ಪ್ರಕರಣ ದಾಖಲಿಸಿರುವುದು ಸತ್ಯಕ್ಕೆ ದೂರವಾಗಿದೆ. ಒಂದು ವೇಳೆ ಸೂಕ್ತವಾದ ದಾಖಲಾತಿಗಳು ಇದ್ದರೇ ಪತ್ರಕರ್ತ ನಾಗರಾಜ ನ್ಯಾಮತಿ ಅವರ ಮೇಲೆ ಕಾನೂನು ಮೂಲಕ ಕ್ರಮಕೈಗೊಳ್ಳಲು ನಮ್ಮದೇನು ಅಭ್ಯಂತರವಿಲ್ಲ ಎಂದರು.ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಪೊಲೀಸರು ಸಮಗ್ರವಾಗಿ ತನಿಖೆ ನಡೆಸಲು ಮುಂದಾಗಬೇಕು. ತನಿಖೆಯಲ್ಲಿ ಒಂದು ವೇಳೆ ಸತ್ಯಾಂಶ ಇಲ್ಲದಿದ್ದರೇ ಕೇಸ್ ವಜಾಗೊಳಿಸಲು ಮುಂದಾಗಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇ ಅಂಗವಾಗಿದೆ. ಅದನ್ನೇ ಊನಗೊಳಿಸುವಂತಹ ಷಢ್ಯಂತ್ರ ನಡೆಯುತ್ತಿರುವುದು ಮಾರಕ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು.ಪತ್ರಕರ್ತರು ನಿರ್ಭಿತಿಯಿಂದ ಕೆಲಸ ಮಾಡುವಂತಹ ವಾತವರಣ ಇಲ್ಲದಂತಾಗಿದೆ. ಸಮಾಜದಲ್ಲಿ ಮಾಧ್ಯಮಗಳನ್ನು ಕಟ್ಟಿ ಹಾಕುವಂತಹ ಕೆಲಸ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅಸಮಾನವಾಗಿದೆ ಎಂದು ಕಿಡಿಕಾರಿದರು.
ಪತ್ರಕರ್ತರ ಸೇವೆ ಅಮೋಘವಾಗಿದೆ. ಆದರೆ ಈ ಸೇವೆಯನ್ನೇ ಕಟ್ಟಿ ಹಾಕುವ ಕೆಲಸ ನಡೆಯುತ್ತಿರುವುದು ಸರಿಯಲ್ಲ. ಹೀಗಾಗದಂತೆ ರಾಜ್ಯ ಸರಕಾರ ಎಚ್ಚರಿಕೆ ವಹಿಸುವುದು ತುಂಬ ಅಗತ್ಯವಿದೆ ಎಂದರು.ಈ ಪ್ರಕರಣವನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರರು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯತನ ಧೋರಣೆ ಅನುಸರಿಸಬಾರದು ಎಂದು ಎಚ್ಚರಿಕೆ ನೀಡಿದರು.
ಸುರಪುರ ಪೊಲೀಸರು ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಬೇಕು. ಯಾರೂ ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮವಾಗಲು ಪಾರದರ್ಶಕವಾಗಿ ತನಿಖೆ ನಡೆಸಬೇಕು. ವಿಳಂಬ ಮಾಡಬಾರದು ಎಂದರು.ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.